Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ, ವಿಡಿಯೋ ನೋಡಿ

ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ, ವಿಡಿಯೋ ನೋಡಿ

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: Ganapathi Sharma

Updated on: Sep 19, 2024 | 12:08 PM

ಅಧಿಕಾರಿಗಳು, ನೌಕರರು ನಿವೃತ್ತಿಯಾಗುವಾಗ ಅದ್ದೂರಿಯಾಗಿ ಬೀಳ್ಕೊಡುಗೆ ಸಮಾರಂಭ ಆಯೋಜಿಸುವುದು, ಸನ್ಮಾನಿಸುವುದು ನೋಡಿದ್ದೇವೆ. ಆದರೆ, ಅವಧಿ ಮುಗಿದ ನಂತರ ವಾಹನಗಳನ್ನು ಗುಜರಿಗೆ ಕಳುಹಿಸುವಾಗಲೂ ಹಾಗೆ ಮಾಡಿದ್ದನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲವೆಂದಾದರೆ ಹುಬ್ಬಳ್ಳಿ ತಾಲ್ಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಸಾರಿಗೆ ಬಸ್ಸಿಗೆ ಮಾಡಿದ ಬೀಳ್ಕೊಡುಗೆಯ ವಿಡಿಯೋ ಇಲ್ಲಿದೆ ನೋಡಿ.

ಹುಬ್ಬಳ್ಳಿ, ಸೆಪ್ಟೆಂಬರ್ 19: ಹುಬ್ಬಳ್ಳಿ ತಾಲ್ಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಒಂದು ಅಪರೂಪದಲ್ಲೇ ಅಪರೂಪದ ಬೀಳ್ಕೊಡುಗೆ ಕಾರ್ಯಕ್ರಮ ನಡೆದಿದೆ. ಅಂದಹಾಗೆ, ಇದು ಯಾವುದೇ ಅಧಿಕಾರಿಗೋ, ನೌಕರರಿಗೋ ಮಾಡಿದ್ದಲ್ಲ. ಬದಲಾಗಿ ಸರ್ಕಾರಿ ಬಸ್ಸಿಗೆ! 15 ವರ್ಷಗಳ ಕಾಲ ಗ್ರಾಮಸ್ಥರ ಸೇವೆ ಮಾಡಿದ ಬಸ್​​ಗೆ ಅವಧಿ ಮುಗಿದ ಕಾರಣ ಗುಜರಿಗೆ ಕಳುಹಿಸುವುದಕ್ಕೂ ಮುನ್ನ ಕೊನೆಯ ದಿನ ಗ್ರಾಮಸ್ಥರು ವಿಶೇಷವಾಗಿ ವಿದಾಯ ಹೇಳಿದ್ದಾರೆ. ಗ್ರಾಮಕ್ಕೆ ಬಸ್ ಬರುತ್ದಿದ್ದಂತೆ ಸಂಪೂರ್ಣವಾಗಿ ಸ್ವಚ್ಛಗೊಳಿಸಿ ವಿಶೇಷವಾಗಿ ತಳಿಲು ತೋರಣಗಳಿಂದ ಅಲಂಕಾರ ಮಾಡಿದ್ದಾರೆ. ಮಧುವಣಗಿತ್ತಿಯಂತೆ ಬಸ್ ಅನ್ನು ಶೃಂಗಾರ ಮಾಡಿ ಪೂಜೆಯನ್ನೂ ಸಲ್ಲಿಸಿದ್ದಾರೆ.

2008 ರಿಂದ ಅಲ್ಲಾಪೂರ ಗ್ರಾಮ ಗ್ರಾಮಕ್ಕೆ ಸಾರಿಗೆ ಇಲಾಖೆ ಬಸ್ ಸೇವೆ ಆರಂಭಿಸಿತ್ತು. ಆ ಬಸ್ ಈವರೆಗೆ 11.80 ಲಕ್ಷ ಕಿಲೋ ಮೀಟರ್ ಸಂಚಾರ ಮಾಡಿದೆ. ಹೀಗಾಗಿ ತಮ್ಮ ಗ್ರಾಮಕ್ಕೆ ಸುಮಾರು 15-16 ವರ್ಷಗಳಿಂದ ಸಂಚಾರ ಸೌಲಭ್ಯ ನೀಡಿದ ಬಸ್​ಗೆ ಜನ ಭಾವನಾತ್ಮಕ ಬೀಳ್ಕೋಡುಗೆ ನೀಡಿದ್ದಾರೆ. ಜತೆಗೆ ಸಾರಿಗೆ ಸಂಸ್ಥೆಯ ಚಾಲಕ-ನಿರ್ವಾಹಕರನ್ನು ಸನ್ಮಾನಿಸಿ ಗೌರವ ಸಲ್ಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ