ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ

Updated on: Jun 11, 2025 | 9:57 PM

‘ಬಿಗ್ ಬಾಸ್’ ಖ್ಯಾತಿಯ ಭ್ಯವಾ ಗೌಡ ಅವರು ‘ಕರ್ಣ’ ಧಾರಾವಾಹಿಯಲ್ಲಿ ನಿಧಿ ಎಂಬ ಪಾತ್ರ ಮಾಡುತ್ತಿದ್ದಾರೆ. ಸೀರಿಯಲ್ ಆರಂಭ ಆಗುವುದಕ್ಕೂ ಮೊದಲೇ ಈ ಪಾತ್ರದ ಬಗ್ಗೆ ಫ್ಯಾನ್ಸ್ ಮಾತನಾಡುತ್ತಿದ್ದಾರೆ. ಈ ಕುರಿತು ಭವ್ಯಾ ಗೌಡ ಅವರಿಗೆ ಬಹಳ ಖುಷಿ ಆಗಿದೆ. ಆ ಕುರಿತು ಟಿವಿ9 ಜೊತೆ ಭವ್ಯಾ ಗೌಡ ಮಾತನಾಡಿದ್ದಾರೆ.

ನಟಿ ಭ್ಯವಾ ಗೌಡ ಅವರು ‘ಕರ್ಣ’ (Karna) ಸೀರಿಯಲ್​ನಲ್ಲಿ ನಿಧಿ ಎಂಬ ಪಾತ್ರ ಮಾಡುತ್ತಿದ್ದಾರೆ. ಸೀರಿಯಲ್ ಶುರು ಆಗುವುದಕ್ಕೂ ಮುನ್ನವೇ ಈ ಪಾತ್ರದ ಬಗ್ಗೆ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಈ ಬಗ್ಗೆ ಭವ್ಯಾ ಗೌಡ ಅವರಿಗೆ ತುಂಬ ಖುಷಿ ಆಗಿದೆ. ನಿಧಿ, ನಿಧಿಮಾ ಎಂದ ಕೂಡಲೇ ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಮಿಲನಾ ನಾಗರಾಜ್ (Milana Nagaraj) ನಿಭಾಯಿಸಿದ ಪಾತ್ರ ನೆನಪಾಗುತ್ತದೆ. ಆ ಪಾತ್ರಕ್ಕೆ ಜನರು ಹೋಲಿಕೆ ಮಾಡುತ್ತಿದ್ದಾರೆ. ಆ ಕುರಿತು ಭವ್ಯಾ ಗೌಡ (Bhavya Gowda) ಅವರು ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More