AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ: ಆ ಒಂದು ವೀಡಿಯೋದಿಂದ 9 ವರ್ಷ ಬಳಿಕ ಬಯಲಾಯ್ತು ಪತ್ನಿಯ ಮಸಲತ್ತು

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ: ಆ ಒಂದು ವೀಡಿಯೋದಿಂದ 9 ವರ್ಷ ಬಳಿಕ ಬಯಲಾಯ್ತು ಪತ್ನಿಯ ಮಸಲತ್ತು

ರಮೇಶ್ ಬಿ. ಜವಳಗೇರಾ
|

Updated on: Nov 23, 2025 | 4:03 PM

Share

ಕಲಬುರಗಿ ಕಡಣ್ಣಿ ಗ್ರಾಮದಲ್ಲಿ 9 ವರ್ಷಗಳ ಹಿಂದೆ ಬೀರಪ್ಪ ಪೂಜಾರಿ ಸಾವನ್ನಪ್ಪಿದ್ದರು. ಅದನ್ನು ಎಲ್ಲರೂ ಸಹಜ ಸಾವು ಎಂದೇ ನಂಬಿದ್ದರು. ಆದರೇ, ಈಗ ಅದು ಸಹಜ ಸಾವು ಅಲ್ಲ, ಸುಪಾರಿ ಕೊಲೆ ಎಂಬ ಸತ್ಯ ಬಹಿರಂಗವಾಗಿದೆ. ಸುಪಾರಿ ಹಣ ಕೇಳಿದ್ದರಿಂದ 9 ವರ್ಷಗಳ ಬಳಿಕ ಕೊಲೆ ಕೇಸ್ ಬೆಳಕಿಗೆ ಬಂದಿದೆ. 2016ರಲ್ಲಿ ನಡೆದಿದ್ದ ಬೀರಪ್ಪಾ ಪೂಜಾರಿ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದುಡ್ಡಿನ ವಿಚಾರದ ವಿಡಿಯೋ ವೈರಲ್ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯನ್ನು ಪತ್ನಿಯೇ ಸುಪಾರಿ ಕೊಟ್ಟು ಮುಗಿಸಿದ್ದಾಳೆ.

ಕಲಬುರಗಿ, (ನವೆಂಬರ್ 23): ಕಲಬುರಗಿಯ ಕಡಣ್ಣಿ ಗ್ರಾಮದಲ್ಲಿ 9 ವರ್ಷಗಳ ಹಿಂದೆ ಬೀರಪ್ಪ ಪೂಜಾರಿ ಸಾವನ್ನಪ್ಪಿದ್ದರು. ಅದನ್ನು ಎಲ್ಲರೂ ಸಹಜ ಸಾವು ಎಂದೇ ನಂಬಿದ್ದರು. ಆದರೇ, ಈಗ ಅದು ಸಹಜ ಸಾವು ಅಲ್ಲ, ಸುಪಾರಿ ಕೊಲೆ ಎಂಬ ಸತ್ಯ ಬಹಿರಂಗವಾಗಿದೆ. ಸುಪಾರಿ ಹಣ ಕೇಳಿದ್ದರಿಂದ 9 ವರ್ಷಗಳ ಬಳಿಕ ಕೊಲೆ ಕೇಸ್ ಬೆಳಕಿಗೆ ಬಂದಿದೆ. ಹೌದು.. ಆತ ಕೃಷಿ ಚಟುವಟಿಕೆ ಮಾಡುತ್ತ ಪತ್ನಿ, ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ. ಆದ್ರೆ ಆತನ ಕುಡಿತ ಚಟ ಗಂಡ ಹೆಂಡತಿ ಮಧ್ಯೆ ಜಗಳಕ್ಕೆ ನಾಂದಿ ಹಾಡಿತ್ತು. ಗಂಡ ಕುಡಿತದ ಚಟಕ್ಕೆ ಬಿದ್ರೆ ಹೆಂಡತಿ ಮತ್ತೋರ್ವನ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡು ಕುಚಿಕು ಕುಚಿಕು ಚಕ್ಕಂದ ಶುರು ಮಾಡಿದ್ದಳು. ಇದಕ್ಕೆ ಅಡ್ಡಿಯಾಗಿದ್ದ ಗಂಡನನ್ನ ಹೆಂಡತಿ ಪ್ರೀಯಕರನ ಜೊತೆಗೂಡಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಳು. ಹತ್ಯೆ ಮಾಡಿದ್ದರ ಬಗ್ಗೆ ಸಣ್ಣ ಸುಳಿವು ಸಿಗದಂತೆ ಗಂಡನಿಗೆ ಚಟ್ಟ ಕಟ್ಟಿದ್ದಳು. ಆದ್ರೆ ಬರೋಬ್ಬರಿ 9 ವರ್ಷದ ಬಳಿಕ ಸುಪಾರಿ ಮರ್ಡರ್ ಗೆ ಆಡಿಯೋ ಸಾಕ್ಷಿ ಸುಳಿವು ಕೊಟ್ಟು ಹಂತಕರನ್ನು ಕಂಬಿ ಹಿಂದೆ ತಳ್ಳಿದೆ. ಕಲಬುರಗಿ ಪೊಲೀಸರು 9 ವರ್ಷದ ಬಳಿಕ ಮರ್ಡರ್ ರಹಸ್ಯ ಭೇದಿಸಿದ್ದೇ ರೋಚಕ‌. 9 ಇಯರ್ ಇಂಟ್ರೇಸ್ಟಿಂಗ್ ಮರ್ಡರ್ ಮಿಸ್ಟರಿ ಇಲ್ಲಿದೆ‌.