ಯಾದಗಿರಿ ಜಿಲ್ಲೆಯ ಜೀವಾನಾಡಿ ಭೀಮಾನದಿಯ ನೀರು ಸಂಪೂರ್ಣ ಕಲುಷಿತ, ಬಳಕೆಗೆ ಯೋಗ್ಯವಲ್ಲ: ಸ್ಥಳೀಯರು

Updated on: Apr 10, 2025 | 1:49 PM

ಭೀಮಾ ನದಿನೀರನ್ನು ಕೇವಲ ನಾಮಕಾವಾಸ್ತೆ ಫಿಲ್ಟರ್ ಮಾಡುತ್ತಾರೆ, ನೀರು ಕುಡಿಯುವ ಜನ ಹಲವು ರೀತಿಯ ಕಾಮಾಲೆ ರೋಗಗಳಿಗೆಗ ತುತ್ತಾಗಿ ನಾಟಿ ಔಷಧಿ ಮಾಡಿಸಿಕೊಳ್ಳಲು ರಾತ್ರಿಯಿಡೀ ಸರತಿ ಸಾಲಲ್ಲಿ ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ. ನಗರಸಭೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳ ನಿರ್ಲಕ್ಷ್ಯ ಅಕ್ಷಮ್ಯ ಎಂದು ಅವರು ಕಿಡಿ ಕಾರುತ್ತಾರೆ.

ಯಾದಗಿರಿ, ಏಪ್ರಿಲ್ 10: ಕೇವಲ ಯಾದಗಿರಿ ನಗರ ಮಾತ್ರವಲ್ಲ, ಸುತ್ತಮುತ್ತಲಿನ ಹಲವಾರು ಹಳ್ಳಿಗಳಿಗೆ ಭೀಮಾನದಿಯ ನೀರು ಸರಬರಾಜು ಆಗುತ್ತದೆ. ಆದರೆ ಭೀಮೆಯ ನೀರು ಕುಡಿಯಲು ಯೋಗ್ಯ ಅಲ್ಲವೇ ಅಲ್ಲ ಅಂತ ನಮ್ಮ ಯಾದಗಿರಿ ವರದಿಗಾರ ವಿಡಿಯೋದಲ್ಲಿ ವಿವರಿಸಿದ್ದಾರೆ. ಯಾದಗಿರಿ ನಗರದ ಚರಂಡಿ ನೀರೆಲ್ಲ (sewerage) ಹಳ್ಳಗಳ ಮೂಲಕ ನದಿಗೆ ಬಂದು ಸೇರುತ್ತಿದೆ ಮತ್ತ್ತು ನದಿ ಪಕ್ಕದಲ್ಲೇ ರುದ್ರಭೂಮಿ ಇದ್ದು ಸತ್ತವರು ಬಳಸುತ್ತಿದ್ದ ಬಟ್ಟೆಬರೆ ಮತ್ತು ಹಾಸಿಗೆಯನ್ನು ದಡದಲ್ಲಿ ಬಿಸಾಡುತ್ತಿರುವುದರಿಂದ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ ಮತ್ತು ಕುಡಿಯುವ ಮಾತು ಹಾಗಿರಲಿ ಇತರ ಬಳಕೆಗೂ ಅಯೋಗ್ಯವಾಗಿದೆ.

ಇದನ್ನೂ ಓದಿ:  ಯಾದಗಿರಿ: ಅಪ್ರಾಪ್ತೆಯೊಂದಿಗೆ ಪ್ರೀತಿಯ ನಾಟಕ, 2 ವರ್ಷ ಲೈಂಗಿಕ ದೌರ್ಜನ್ಯವೆಸಗಿದ ಪೊಲೀಸ್ ಕಾನ್ಸ್​ಟೇಬಲ್​

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More