ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆ, ಭೂತ್ಪೂರ ಸೇತುವೆ ಮುಳುಗಡೆ; ಕಲಬುರಗಿ, ಸೇಡಂಗೆ ಸಂಪರ್ಕ ಕಟ್

Updated on: Jul 22, 2025 | 12:04 PM

ಈಗಾಗಲೇ ವರದಿಯಾಗಿರುವಂತೆ ಚಿಂಚೋಳಿ ಸೇರಿದಂತೆ ಕಲಬುರಗಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ, ಅನೇಕ ಕಡೆಗಳಲ್ಲಿ ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ ಮತ್ತು ಕೆಲವು ಭಾಗಗಳಲ್ಲಿ ಸೇತುವೆ ಮತ್ತು ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಚಿಂಚೋಳಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸೇಡಂ ರಸ್ತೆಯಲ್ಲಿರುವ ತೋಂಟದಾರ್ಯ ಸಿದ್ದೇಶ್ವರ ಮಠದ ಆವರಣಕ್ಕೂ ನೀರು ನುಗ್ಗಿದೆ.

ಕಲಬುರಗಿ, ಜುಲೈ 22: ಜಿಲ್ಲೆಯ ಚಿಂಚೋಳಿ ತಾಲೂಕಿನ ಭೂತ್ಪೂರ ಗ್ರಾಮಕ್ಕೆ (Bhutpur village) ಹೋಗುವ ರಸ್ತೆಯಿದು. ರಸ್ತೆ ಎಲ್ಲಿ ಅಂತ ಕೇಳಬೇಡಿ. ಅಸಲಿಗೆ ಇಲ್ಲೊಂದು ಸೇತುವೆ ಇದ್ದು ಅದು ಸಂಪೂರ್ಣವಾಗಿ ಮುಳುಗಿಹೋಗಿ ರಸ್ತೆಯ ಮೇಲೆ ರಭಸದಿಂದ ನೀರು ಹರಿಯುತ್ತಿದೆ. ಭೂತ್ಪೂರ ಗ್ರಾಮದ ನಿವಾಸಿಗಳಿಗೆ ಸೇಡಂ, ಕಾಳಗಿ ಮತ್ತು ಚಿಂಚೋಳಿಗೆ ಹೋಗುವ ರಸ್ತೆ ಇದೇ ಆಗಿರವುದರಿಂದ ಸಂಪರ್ಕ ಕಟ್ ಆಗಿದೆ. ದ್ವಿಚಕ್ರವಾಹನಗಳಲ್ಲಿ ತೆರಳುವವರು ಸೇತುವೆ ಮೇಲೆ ನೀರು ಭೋರ್ಗರೆಯುತ್ತಿರುವುದನ್ನು ನೋಡಿ ವಿಧಿಯಿಲ್ಲದೆ ವಾಪಸ್ಸು ಹೋಗುತ್ತಿದ್ದಾರೆ. ಮತ್ತೇ ಮಳೆಯಾಗುವ ಮುನ್ಸೂಚನೆ ಇರೋದ್ರಿಂದ ಜನರು ನಿರಾಳರಾಗುವ ಸನ್ನಿವೇಶವೇನೂ ಇಲ್ಲ.

ಇದನ್ನೂ ಓದಿ:    ಟಿಬಿ ಡ್ಯಾಂನಿಂದ ತುಂಗಭದ್ರಾ ನದಿಗೆ 80,000 ಕ್ಯೂಸೆಕ್ಸ್ ನೀರು ಹೊರಹರಿವು, ಮುಳುಗಡೆ ಭೀತಿಯಲ್ಲಿ ಕಂಪ್ಲಿ ಸೇತುವೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ