ಮಲತಾಯಿಯ ನೀಚ ಕೃತ್ಯಕ್ಕೆ ಪ್ರಾಣ ಕಳೆದುಕೊಂಡ ಆರು ವರ್ಷದ ಹೆಣ್ಣು ಮಗು
ಮಹಿಳೆಯೊಬ್ಬಳು ತನ್ನ ಆರು ವರ್ಷದ ಮಲ ಮಗಳನ್ನು ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದಂತಹ ಘಟನೆ ಬೀದರ್‌ನಲ್ಲಿ ನಡೆದಿದೆ. ಆಗಸ್ಟ್ 27 ರಂದು ಈ ಘಟನೆ ನಡೆದಿದ್ದು, ರಾಧ ಎಂಬಾಕೆ ತನ್ನ ಮಲ ಮಗಳು ಶಾನ್ವಿಯನ್ನು ಉದ್ದೇಶಪೂರ್ವಕವಾಗಿ ಕಟ್ಟಡ ಮೂರನೇ ಮಹಡಿಯ ಟೆರೇಸ್‌ನಿಂದ ತಳ್ಳಿ ಆಕೆಯ ಸಾವು ಆಕಸ್ಮಿಕ ಎಂದು ಬಿಂಬಿಸಿದ್ದಳು. ಇದೀಗ ಸಿಸಿ ಟಿವಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು, ಸದ್ಯ ಪೊಲೀಸರು ರಾಧಳನ್ನು ಬಂಧಿಸಿದ್ದಾರೆ.
ಬೀದರ್, ಸೆಪ್ಟೆಂಬರ್ 16: ಮಲತಾಯಿ (stepmother) ತನ್ನ ಆರು ವರ್ಷದ ಮಗಳನ್ನು ಕೊಂದು ಕ್ರೌರ್ಯ ಮೆರೆದಂತಹ ಆಘಾತಕಾರಿ ಘಟನೆ ಬೀದರ್‌ನ ಆದರ್ಶ ಕಾಲೋನಿಯಲ್ಲಿ ನಡೆದಿದೆ. ತಾವು ವಾಸಿಸುತ್ತಿದ್ದ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಳು. ಆಗಸ್ಟ್ 27 ರಂದು ಈ ಘಟನೆ ನಡೆದಿದ್ದು, 20 ವರ್ಷದ ರಾಧ ತನ್ನ 6 ವರ್ಷ ವಯಸ್ಸಿನ ಮಲಮಗಳು ಶಾನ್ವಿಯನ್ನು ಟೆರೇಸ್ ಮೇಲಿಂದ ತಳ್ಳಿ ಕೊಲೆ ಮಾಡಿ, ಮಗಳ ಸಾವು ಆಕಸ್ಮಿಕ ಎಂದು ಬಿಂಬಿಸಿದ್ದಳು. ಆದರೆ ಇದೀಗ ಪಕ್ಕದಲ್ಲಿದ ಸಿಸಿಟಿವಿ ಕ್ಯಾಮೆರಾದಲ್ಲಿ ಆಕೆಯ ಕೃತ್ಯ ಸೆರೆಯಾಗಿದ್ದು, ಸದ್ಯ ಕೊಲೆ ಆರೋಪದ ಮೇಲೆ ರಾಧಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 16, 2025 12:57 PM
Latest Videos

