ಒಂದೇ ದಿನಕ್ಕೆ ಕಿತ್ತು ಬಂದ ಕೆ.ಆರ್. ಪೇಟೆಯ ಆಸ್ಪತ್ರೆ ಆವರಣದಲ್ಲಿ ಹಾಕಿದ್ದ 27 ಕೋಟಿ ವೆಚ್ಚದ ಡಾಂಬರ್ ರಸ್ತೆ
ಮಂಡ್ಯದ ಕೆ.ಆರ್. ಪೇಟೆಯ ನೂತನ ತಾಯಿ ಮಕ್ಕಳ ಆಸ್ಪತ್ರೆಯ ಆವರಣದ ರಸ್ತೆಯಲ್ಲಿ 27 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಕಾರ್ಯ ನಡೆದಿದ್ದು, ಡಾಂಬರೀಕರಣ ನಡೆದ ಒಂದೇ ದಿನದಲ್ಲಿ ರಸ್ತೆ ಡಾಂಬರ್ ಕಿತ್ತು ಬಂದಿದ್ದು, ಕಳಪೆ ಕಾಮಗಾರಿಯ ವಿರುದ್ಧ ಸಾರ್ವಜನಿಕರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮಂಡ್ಯ, ಸೆಪ್ಟೆಂಬರ್ 16: ಮಂಡ್ಯದ ಕೆ.ಆರ್. ಪೇಟೆಯ ನೂತನ ತಾಯಿ ಮಕ್ಕಳ ಆಸ್ಪತ್ರೆಯ ಆವರಣದ ರಸ್ತೆಗೆ ಹಾಕಿದ ಡಾಂಬರ್ (Asphalt concrete) ಒಂದೇ ದಿನಕ್ಕೆ ಕಿತ್ತು ಹೋಗಿದೆ. 27 ಕೋಟಿ ರೂ. ವೆಚ್ಚದಲ್ಲಿ ಈ ಡಾಂಬರೀಕರಣ ಕಾರ್ಯ ನಡೆದಿದೆ ಎಂದು ಹೇಳಲಾಗುತ್ತಿದ್ದು, ಬರಿಗೈನಲ್ಲಿ ಡಾಂಬರ್ ಕಿತ್ತು ಹಾಕಿ ಕಳಪೆ ಕಾಮಗಾರಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿ ಮಾಡಿದ ಆರೋಪ ಕೇಳಿ ಬಂದಿದ್ದು, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

