ಬೀದರ್ನಲ್ಲಿ ಭಾರಿ ಮಳೆಗೆ ವ್ಯಾಪಕ ಬೆಳೆ ಹಾನಿ: ಪರಿಶೀಲನೆಗೆ ಪ್ರವಾಹದ ನೀರಿಗೆ ಇಳಿದೇ ಬಿಟ್ಟ ಶಾಸಕ ಶರಣು ಸಲಗರ!
ಉತ್ತರ ಕರ್ನಾಟಕದ ವಿವಿಧ ಕಡೆಗಳಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಬೀದರ್ನ ಬಸವಕಲ್ಯಾಣದಲ್ಲಿ ವ್ಯಾಪಕ ಬೆಳೆ ಹಾನಿ ಸಂಭವಿಸಿದೆ. ಶಾಸಕ ಶರಣು ಸಲಗರ ಶನಿವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕರು ಬೆಳೆ ಹಾನಿ ವೀಕ್ಷಿಸುತ್ತಿರುವ ವಿಡಿಯೋ ಇಲ್ಲಿದೆ.
ಬೀದರ್, ಸೆಪ್ಟೆಂಬರ್ 27: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ ಶರಣು ಸಲಗರ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿದರು. ನಿರಂತರ ಮಳೆಯಿಂದಾಗಿ ರೈತರ ಹೊಲದಲ್ಲಿ ಎದೆ ಎತ್ತರದಷ್ಟು ನೀರು ನಿಂತುಕೊಂಡು ಕಟಾವಿಗೆ ಬಂದಿದ್ದ ಉದ್ದು ಹೆಸರು ಬೆಳೆ ಸಂಪೂರ್ಣ ಹಾನಿಯಾಗಿದೆ. ಅತಿಹೆಚ್ಚು ಬೆಳೆ ಹಾನಿಯಾದ ಗ್ರಾಮಗಳಿಗೆ ಹೋಗಿ ಶಾಸಕ ಶರಣು ಸಲಗರ ಬೆಳೆ ಹಾನಿ ಪರಿಶೀಲನೆ ಮಾಡಿದರು. ಗೌರ,ಖಂಡಾಳ,ಗುತ್ತಿ, ಮಿರಖಲ ಗ್ರಾಮಗಳಿಗೆ ಶಾಸಕ ಶರಣು ಸಲಗರ ಭೇಟಿ ನೀಡಿದರು. ಇದೇ ವೇಳೆ ಉಕ್ಕಿದ ನದಿಯ ಪ್ರವಾಹದ ಜಾಗದಲ್ಲಿ ಆಳ ನೋಡಲು ಇಳಿದೇ ಬಿಟ್ಟರು.
