ಬೀದರ್ನಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ದಂಧೆ: ಕಂಡು ಕಾಣದಂತೆ ಕುಳಿತ ಅಧಿಕಾರಿಗಳು
ಬೀದರ್ ನಗರದ ಹೊರವಲಯದಲ್ಲಿರುವ ಮಲ್ಕಾಪುರ ಗ್ರಾಮದ ಬಳಿ ಪಕ್ಕದಲ್ಲಿಯೇ ಬೃಹತ್ ಗುಡ್ಡವನ್ನ ಕೊರೆದು ಅಕ್ರಮ ಕೆಂಪು ಮಣ್ಣು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಇಲ್ಲಿ ಅಕ್ರಮ ಮಣ್ಣು ಕೊರೆಯುವ ಕೆಲಸ ನಡೆಯುತ್ತಿದ್ದರು ಗಣಿ ಮತ್ತು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕುಳಿತುಬಿಟ್ಟಿದ್ದಾರೆ.
ಬೀದರ್, ನವೆಂಬರ್ 25: ನಗರದ ಹೊರವಲಯದಲ್ಲಿರುವ ಮಲ್ಕಾಪುರ ಗ್ರಾಮದ ಬಳಿ ಪಕ್ಕದಲ್ಲಿಯೇ ಬೃಹತ್ ಗುಡ್ಡವನ್ನ ಕೊರೆದು ಅಕ್ರಮ ಕೆಂಪು ಮಣ್ಣು (red soil) ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಇಲ್ಲಿ ಅಕ್ರಮ ಮಣ್ಣು ಕೊರೆಯುವ ಕೆಲಸ ನಡೆಯುತ್ತಿದ್ದರು ಗಣಿ ಮತ್ತು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕುಳಿತುಬಿಟ್ಟಿದ್ದಾರೆ. ನಾಲ್ಕು ವರ್ಷದ ಹಿಂದೆ ಇದೆ ಸ್ಥಳದಲ್ಲಿಯೇ ಅಕ್ರಮವಾಗಿ ಮಣ್ಣನ್ನ ತೆಗೆದಯುತ್ತಿದ್ದರು. ಆಗ ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ ಶ್ರವಣ ಇಲ್ಲಿನ ಅಕ್ರಮ ಮಣ್ಣು ತೆಗೆಯುವ ಕೆಲಸಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಈಗ ಮತ್ತೆ ಅಕ್ರಮ ಮಣ್ಣು ಕೊರೆಯುವ ದಂಧೆ ಹೆಚ್ಚಾಗಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಬ್ರೇಕ್ ಹಾಕಬೇಕು ನಮ್ಮ ಸುಂದರವಾದ ಪರಿಸರವನ್ನ ಕಾಪಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 25, 2023 10:35 PM
Latest Videos