Karnataka Assembly Polls; ರಮೇಶ್ ಜಾರಕಿಹೊಳಿ ಕಾಟದಿಂದ ಬೇಸತ್ತ ಲಕ್ಷ್ಮಣ ಸವದಿಯನ್ನು ಡಿಕೆ ಶಿವಕುಮಾರ್ ಬೆಂಗಳೂರಿಗೆ ಕರೆಸಿಕೊಂಡರು!

|

Updated on: Apr 14, 2023 | 10:50 AM

ಸವದಿ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಸವದಿ ಕಾಂಗ್ರೆಸ್ ಪಕ್ಷ ಸೇರುವುದು ಆಲ್ಮೋಸ್ಟ್ ಖಚಿತ ಅಂತ ಹೇಳಲಾಗುತ್ತಿದೆ.

ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಲಕ್ಷ್ಮಣ ಸವದಿ (Laxman Savadi) ನಡುವಿವ ತಿಕ್ಕಾಟ ಮುಂದಿನ ಹಂತ ತಲುಪಿದೆ. ಇದನ್ನು ರಮೇಶ್ ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವೆ ಬಹಳ ದಿನಗಳಿಂದ ಜಾರಿಯಲ್ಲಿರುವ ಕಿತ್ತಾಟದ ಮತ್ತೊಂದು ಹಂತ ಅಂದರೂ ತಪ್ಪಾಗಲಾರದು. ವಿಷಯವೇನೆಂದರೆ, ರಮೇಶ್ ರಿಂದಾಗಿ ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ಲಕ್ಷ್ಮಣ ಸವದಿ ನಿನ್ನೆ ಬಿಜೆಪಿಯನ್ನು ತ್ಯಜಿಸುವ ಬಗ್ಗೆ ಮಾತಾಡಿದ್ದನ್ನು ವರದಿ ಮಾಡಿದ್ದೇವೆ. ಇಂದಿನ ಪ್ರಮುಖ ಬೆಳವಣಿಗೆಯೆಂದರೆ, ಸವದಿಯನ್ನು ಶಿವಕುಮಾರ್ ಒಂದು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಸವದಿ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಸವದಿ ಕಾಂಗ್ರೆಸ್ ಪಕ್ಷ ಸೇರುವುದು ಆಲ್ಮೋಸ್ಟ್ ಖಚಿತ ಅಂತ ಹೇಳಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 14, 2023 10:32 AM