ಟಿವಿ9 ವರದಿಯ ಬಿಗ್​ ಇಂಪ್ಯಾಕ್ಟ್ : ಅರಣ್ಯ ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಎಲ್ಲಾ 12 ಶಾಲೆಗಳು ಓಪನ್ ಮಾಡುವಂತೆ ಸರ್ಕಾರದ ಸೂಚನೆ

ಶೂನ್ಯ ದಾಖಲಾತಿಯಾದ ಹಿನ್ನೆಲೆ ಜಿಲ್ಲಾಡಳಿತ 12 ಶಾಲೆಗಳನ್ನು ಮುಚ್ಚಿತ್ತು. ಈ ಕುರಿತು ಟಿವಿ9 ವರದಿ ಬಿತ್ತರಿಸಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಬಂದ್ ಆಗಿದ್ದ ಶಾಲೆಗಳನ್ನ ರೀ ಓಪನ್ ಮಾಡಲು ಮುಂದಾಗಿದೆ. ಮಕ್ಕಳನ್ನ ಮರಳಿ ಶಾಲೆಗೆ ಕರೆ ತರಲು ಮುಂದಾಗಿದೆ. ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾಹಿತಿ ನೀಡಿದ್ದಾರೆ..

| Edited By: ಸಾಧು ಶ್ರೀನಾಥ್​

Updated on: Sep 12, 2023 | 9:23 AM

ಚಾಮರಾಜನಗರ ಜಿಲ್ಲೆಯಲ್ಲಿ ಬರೋಬ್ಬರಿ 12 ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲಾಗಿತ್ತು. ಶೂನ್ಯ ದಾಖಲಾತಿಯಾದ ಕಾರಣ ಬೀಗ ಜಡಿಯಲಾಗಿತ್ತು ಈ ಕುರಿತು ನಿರಂತರ ಸುದ್ದಿ ಬಿತ್ತರಿಸಿದ್ದ ಟಿವಿ9 ವರದಿ ಫಲಶೃತಿಯಾಗಿದೆ (Big impact of TV9 report). ಪ್ರಕರಣವನ್ನ ಗಂಭೀರವಾಗಿ ಪರಗಣಿಸಿರುವ ಜಿಲ್ಲಾಡಳಿತ ಮರಳಿ ಸರ್ಕಾರಿ ಶಾಲೆಗೆ ಮಕ್ಕಳನ್ನ ಕರೆತರಲು ಮುಂದಾಗಿದೆ (School Reopen). ಗಡಿ ಜಿಲ್ಲೆ ಚಾಮರಾಜನಗರದಲ್ಲಿ 12 ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯಲಾಗಿತ್ತು. 12 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾದ ಹಿನ್ನೆಲೆ ಜಿಲ್ಲಾಡಳಿತ ಶಾಲೆಗಳನ್ನು (Karnataka Government) ಮುಚ್ಚಿತ್ತು. ಈ ಕುರಿತು ಟಿವಿ9 ವರದಿ ಬಿತ್ತರಿಸಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಬಂದ್ ಆಗಿದ್ದ 12 ಸರ್ಕಾರಿ ಶಾಲೆಗಳನ್ನ ರೀ ಓಪನ್ ಮಾಡಲು ಮುಂದಾಗಿದೆ. ಮಕ್ಕಳನ್ನ ಮತ್ತೆ ಮರಳಿ ಶಾಲೆಗೆ ಕರೆ ತರಲು ಮುಂದಾಗಿದೆ. ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವ್ರು ಮಾಹಿತಿ ನೀಡಿದ್ದಾರೆ..

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಸರಿಯಿಲ್ಲ. ಗುಣಮಟ್ಟದ ಶಿಕ್ಷಣ ಕೊರತೆಯಿದೆ.. ಶಿಕ್ಷಕರು ಸರಿಯಾಗಿ ಬರೋದಿಲ್ಲ. ಪಾಠ ಮಾಡೋದಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ.. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸೋದ್ರ ಜೊತೆಗೆ ಪೋಷಕರ ಮನವೊಲಿಸಿ ಮತ್ತೆ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಈಗ ಜಿಲ್ಲಾಡಳಿತ ಮುಂದಾಗಿದೆ. ಸ್ವತಃ ಜಿಲ್ಲಾಧಿಕಾರಿ ಶಿಲ್ಪಾನಾಗ್ ಖುದ್ದು ಡಿಡಿಪಿಐ ಬಳಿ ಮಾಹಿತಿ ಪಡೆದಿದ್ದು, ಮುಂದಿನ ದಿನಗಳಲ್ಲಿ ಮುಚ್ಚಿದ್ದ 12 ಸರ್ಕಾರಿ ಶಾಲೆಗಳನ್ನ ಮತ್ತೆ ಪುನರಾರಂಭ ಮಾಡುವಂತೆ ಸೂಚನೆ ನೀಡಿದ್ದಾರೆ.

ಅದೇನೆ ಹೇಳಿ ಬದುಕಲು ಸರ್ಕಾರಿ ಕೆಲಸ ಬೇಕು.. ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆ ಬೇಕು.. ಓಡಾಡಲು ಉಚಿತ ಸರ್ಕಾರಿ ಬಸ್ ಬೇಕು.. ಆದ್ರೆ ಕಲಿಕೆಗೆ ಮಾತ್ರ ಸರ್ಕಾರಿ ಶಾಲೆಗಳು ಬೇಡ ಎಂಬುದು ಎಷ್ಟು ಸರಿ ಎಂಬುದೇ ಈಗಿನ ಪ್ರಶ್ನೆಯಾಗಿದೆ.. ಸರ್ಕಾರ ಕೂಡ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ವೃದ್ಧಿಸುವ ಕೆಲಸ ಮಾಡಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಹೇಳಿದ್ದಕ್ಕೆ ಶಿವಕುಮಾರ್ ನಕ್ಕಿದ್ಯಾಕೆ?
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಹೇಳಿದ್ದಕ್ಕೆ ಶಿವಕುಮಾರ್ ನಕ್ಕಿದ್ಯಾಕೆ?
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್
ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್