Loading video

ಬಿಗ್ ಬಾಸ್ ಕನ್ನಡ ಸೀಸನ್ 11: ತನ್ನ ಬಗ್ಗೆ ಸುದ್ದಿ ಪ್ರಕಟಿಸುವ ಮೊದಲು ಸಂಪರ್ಕಿಸುವಂತೆ ಮಾಧ್ಯಮಗಳನ್ನು ವಿನಂತಿಸಿಕೊಂಡ ರಜತ್

|

Updated on: Jan 27, 2025 | 8:09 PM

ಬಿಗ್ ಬಾಸ್ ಕನ್ನಡ ಸೀಸನ್ 11: ಪತ್ರಿಕಾ ಗೋಷ್ಠಿಯ ಅಂತ್ಯದಲ್ಲಿ ಬಿಗ್ ಬಾಸ್ ವಿನ್ನರ್ ಹನುಮಂತ ಅವರಿಗೆ ಕಪ್ ಮೇಲೆ ಎತ್ತಿ ಹಿಡಿಯುವಂತೆ ಹೇಳಲಾಯಿತು. ಈಗಾಗಲೇ ವರದಿ ಮಾಡಿರುವ ಹಾಗೆ ಸುದ್ದಿಗೋಷ್ಠಿಯ ಲೈಮ್​ಲೈಟನ್ನು ಹನುಮಂತ ಟ್ರೇಡ್ ಮಾರ್ಕ್ ಮುಗ್ಧತೆಯೊಂದಿಗೆ ತನ್ನ ಮೇಲೆಳೆದುಕೊಂಡರು. ಗೆದ್ದಿರುವ ಹಣದಿಂದ ಅವರು ತಮ್ಮೂರಲ್ಲಿ ಮನೆ ಕಟ್ಟಿಸಿ ಮನ ಮೆಚ್ಚಿದ ಹುಡುಗಿಯನ್ನು ಮದುವೆಯಾಗುತ್ತಾರಂತೆ!

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಗೆದ್ದ ಸ್ಪರ್ಧಿಗಳ ಮಾಧ್ಯಮ ಗೋಷ್ಠಿಯನ್ನು ಹನುಮಂತು, ತ್ರಿವಿಕ್ರಮ್ ಮತ್ತು ರಜತ್ ತಮ್ಮ ವೈಯಕ್ತಿಕ ವಿಷಯಗಳನ್ನು ಹೇಳಿಕೊಳ್ಳಲು ಸಹ ಬಳಸಿದರು. ವೈಲ್ಡ್ ಕಾರ್ಡ್ ಎಂಟ್ರಂಟ್ ರಜತ್ ತಮ್ಮ ಬಗ್ಗೆ ಹಬ್ಬಿದ ವದಂತಿಯೊಂದರ ಬಗ್ಗೆ ಸ್ಪಷ್ಟನೆ ನೀಡಿದರು. ತನ್ನ ಕುರಿತು ಯಾವುದೇ ಮಾಹಿತಿಯನ್ನು ಪಬ್ಲಿಷ್ ಮಾಡುವ ಮೊದಲು ದಯವಿಟ್ಟು ತಮ್ಮನ್ನೊಮ್ಮೆ ಸಂಪರ್ಕಿಸುವಂತೆ ಅವರು ವಿನಂತಿಸಿಕೊಂಡರು. ಗಾಳಿಸುದ್ದಿಯಿಂದ ತನ್ನ ಫ್ಯಾಮಿಲಿ ಪ್ರಭಾವಕ್ಕೊಳಗಾಗುತ್ತಿದೆ ಎಂದು ರಜತ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಪ್ ಗೆಲ್ಲುವ ಭರವಸೆಯಲ್ಲಿ ರಜತ್