ಬಾಡಿಗೆ ಮನೆಯಲ್ಲಿದ್ದೇನೆ, ಬಿಗ್ ಬಾಸ್ ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್

ಬಾಡಿಗೆ ಮನೆಯಲ್ಲಿದ್ದೇನೆ, ಬಿಗ್ ಬಾಸ್ ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್

Mangala RR
| Updated By: ಮದನ್​ ಕುಮಾರ್​

Updated on: Jan 28, 2025 | 8:22 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮಕ್ಕೆ ಇತ್ತೀಚೆಗೆ ತೆರೆ ಬಿತ್ತು. ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಪ್ರಶ್ನೆ ವೀಕ್ಷಕರ ಮನದಲ್ಲಿ ಕೊರೆಯುತ್ತಿದೆ. ಯಾರೂ ಕೂಡ ಪಕ್ಕಾ ಲೆಕ್ಕವನ್ನು ಹೇಳುತ್ತಿಲ್ಲ. ತ್ರಿವಿಕ್ರಮ್ ಅವರಿಗೆ ಸಂಭಾವನೆ ಹೊರತುಪಡಿಸಿ ಬಹುಮಾನದ ಮೊತ್ತವಾಗಿ 15 ಲಕ್ಷ ರೂಪಾಯಿ ಕೂಡ ಸಿಕ್ಕಿತು. ಈ ಎಲ್ಲ ವಿಚಾರಗಳ ಬಗ್ಗೆ ತ್ರಿವಿಕ್ರಮ್ ಅವರು ಮಾತಾಡಿದ್ದಾರೆ.

ಬಿಗ್ ಬಾಸ್ ಶೋ ಮುಗಿದ ಬಳಿಕ ತ್ರಿವಿಕ್ರಮ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಸಿಕ್ಕಿರುವ ಸಂಭಾವನೆ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್ ಶೋಗೆ ಹೋಗುವುದಕ್ಕೂ ಮುನ್ನ ತ್ರಿವಿಕ್ರಮ್ ಅವರಿಗೆ ಹೆಚ್ಚಿನ ಆಫರ್​ಗಳು ಇರಲಿಲ್ಲ. ಹಾಗಾಗಿ ಸಾಲ ಮಾಡಿಕೊಂಡಿದ್ದರು. ಈಗಲೂ ಅವರು ಬಾಡಿಗೆ ಮನೆಯಲ್ಲಿ ಇದ್ದಾರೆ. ಬಿಗ್ ಬಾಸ್​ನಿಂದ ಬಂದ ಸಂಭಾವನೆಯಲ್ಲಿ ಸಾಲ ತೀರಿಸುವುದಾಗಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.