ಬಿಗ್ ಬಾಸ್ ಮನೆಯಲ್ಲಿ ನಡೆಯಿತು ಮೊದಲ ಜಗಳ: ಹೋಗೆ, ಬಾರೆ ಎಂದ ಗಿಲ್ಲಿ ನಟ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಮೊದಲ ಜಗಳ ಶುರುವಾಗಿದೆ. 2ನೇ ದಿನವೇ ಸ್ಪರ್ಧಿಗಳ ನಡುವೆ ಕಿರಿಕ್ ಆಗಿದೆ. ಅಶ್ವಿನಿ ಗೌಡ ಅವರು ಗಿಲ್ಲಿ ನಟ ಮತ್ತು ಕಾವ್ಯಾ ಶೈವಗೆ ಕೆಲವು ಕಿವಿಮಾತು ಹೇಳಲು ಬಂದರು. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ ಮೊದಲ ಜಗಳ ಶುರುವಾಗಿದೆ. 2ನೇ ದಿನವೇ ಸ್ಪರ್ಧಿಗಳ ನಡುವೆ ಕಿರಿಕ್ ಆಗಿದೆ. ಅಶ್ವಿನಿ ಗೌಡ ಅವರು ಗಿಲ್ಲಿ ನಟ ಹಾಗೂ ಕಾವ್ಯಾ ಶೈವಗೆ ಕೆಲವು ಕಿವಿಮಾತು ಹೇಳಲು ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ‘ಮರ್ಯಾದೆ ಕೊಟ್ಟು ಮರ್ಯಾದೆ ತಗೊಳ್ಳಿ’ ಎಂದು ಅಶ್ವಿನಿ ಗೌಡ (Ashwini Gowda) ಹೇಳಿದರು. ‘ಗೌರವ ಇರೋದಕ್ಕೆ ಮೇಡಂ ಅಂತ ಮಾತಾಡಿದ್ದೇನೆ. ಇಲ್ಲ ಅಂದಿದ್ದರೆ ಹೋಗೆ ಬಾರೆ ಎನ್ನುತ್ತಿದ್ದೆ’ ಎಂದು ಗಿಲ್ಲಿ ನಟ (Gilli Nata) ಹೇಳಿದ್ದಾರೆ. ಆ ಮಾತು ಕೇಳಿದ ಬಳಿಕ ಅಶ್ವಿನಿ ಗೌಡ ಅವರು ಗರಂ ಆಗಿದ್ದಾರೆ. ಸೆ.30ರ ಸಂಚಿಕೆಯ ಈ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
