‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ

Updated on: Sep 09, 2026 | 9:33 AM

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಗಗನ್ ಮತ್ತು ಮಂಜುನಾಥ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಆಹಾರ ಆಧಾರಿತ ಟಾಸ್ಕ್ ಒಂದರ ಸಂದರ್ಭದಲ್ಲಿ ಇಬ್ಬರ ನಡುವೆ ಮಾತುಗಳು ಮಿತಿಮೀರಿವೆ. "ನಾನು ಹೇಳಿದ್ನಲ್ಲ, ಬಡಿದು ಬಾಯಿಗೆ ಹಾಕಿ ಹೋಗ್ತೀನಿ," "ಅಧಿಕಪ್ರಸಂಗ ಮಾತಾಡಬೇಡ" ಎಂಬಂತಹ ಮಾತಿನ ಚಕಮಕಿ ನಡೆದು ಮನೆಯ ವಾತಾವರಣ ಬಿಸಿಯಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ಮತ್ತು ವೈಯಕ್ತಿಕ ಘರ್ಷಣೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಇತ್ತೀಚಿನ ಒಂದು ಸಂಚಿಕೆಯಲ್ಲಿ ಗಗನ್ ಮತ್ತು ಮಾಡರ್ನ್​ ಮಹಾಕವಿ ಮಂಜು ನಡುವೆ ಭುಗಿಲೆದ್ದ ತೀವ್ರ ವಾಗ್ವಾದ ಎಲ್ಲರ ಗಮನ ಸೆಳೆದಿದೆ.

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ನ ಒಂದನ್ನು ನೀಡಲಾಗಿತ್ತು. ತಮಗೆ ಮೀಸಲಿರುವ ಎಲ್ಲಾ ತಿಂಡಿಗಳನ್ನು ಮೊದಲು ತಿಂದು ಖಾಲಿ ಮಾಡುವ ತಂಡ ಈ ಟಾಸ್ಕ್ ಗೆಲ್ಲುತ್ತದೆ. ಈ ವೇಳೆ ಫುಲ್ ಖಾರ ಹಾಕಿ ಅಡುಗೆ ಮಾಡಲಾಗಿದೆ. ಆದರೆ, ಮಂಜು ಇದನ್ನು ತಿಂದು ತೇಗಿದ್ದಾರೆ. ಅವರೇ ಟಾಸ್ಕ್ ಗೆದ್ದರೇ ಎನ್ನುವ ಪ್ರಶ್ನೆ ಮೂಡಿದೆ. ಮಂಜು ಮತ್ತು  ಗಗನ್ ನಡುವೆ ಇದೇ ವಿಷಯಕ್ಕೆ ವಾಗ್ವಾದ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More