ಕುಣಿದು ಕುಪ್ಪಳಿಸಿ ಪಟಾಕಿ ಹೊಡೆದು ಸಂಭ್ರಮಿಸಿದ ಮಂಜು ಪಾವಗಡ ಅಭಿಮಾನಿಗಳು; ಸಂಭ್ರಮಾಚರಣೆಯ ಝಲಕ್ ಇಲ್ಲಿದೆ
ಮಂಜು ಪಾವಗಡ ಗೆಲುವಿನ ಬಗ್ಗೆ ಮಾತನಾಡಿದ ಅವರ ತಂದೆ, ನನ್ನ ಮಗ ಗೆದ್ದಿರೋದಕ್ಕೆ ಸಂತೋಷಪಡುತ್ತೇವೆ. ಒಬ್ಬ ಹಳ್ಳಿಗಾಡಿನಲ್ಲಿ ಹುಟ್ಟಿ ಬಡತನದಿಂದ ಬಂದು ಈ ಸಾಧನೆ ಮಾಡಿದ್ದಾನೆ. ಆ ಛಲದಿಂದ ವಿನ್ನರ್ ಆಗಿದ್ದಾನೆ ಎಂದು ಖುಷಿಪಟ್ಟಿದ್ದಾರೆ.
ಕನ್ನಡ ಕಿರುತೆರೆಯ ಅದ್ದೂರಿ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ 8ನೇ ಅವತರಣಿಕೆಯಲ್ಲಿ ಕಲಾವಿದ ಮಂಜು ಪಾವಗಡ ಗೆಲುವು ಸಾಧಿಸಿದ್ದಾರೆ. ಬಾಲ್ಯದಿಂದಲೂ ಬಡತನವನ್ನೇ ಕಂಡು ಕಷ್ಟದ ನಡುವೆಯೂ ಹಾಸ್ಯ ಕಲಾವಿದನಾಗಿ ರೂಪುಗೊಂಡು ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ಮಂಜು ಪಾವಗಡ ಬಿಗ್ಬಾಸ್ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿರುವುದಕ್ಕೆ ಕುಟುಂಬಸ್ಥರು, ಸ್ನೇಹಿತರು, ಹಿತೈಶಿಗಳು, ಸಂಬಂಧಿಗಳು, ನೆರೆಹೊರೆಯವರು, ಅಭಿಮಾನಿಗಳು ಹೀಗೆ ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಬಿಗ್ಬಾಸ್ ವಿನ್ನರ್ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಮಂಜು ಪಾವಗಡ ಮನೆಯಲ್ಲಿ ಸಂಭ್ರಮ ಬೀಡುಬಿಟ್ಟಿದೆ.
ತಡರಾತ್ರಿವರೆಗೂ ಮಂಜು ಕುಟುಂಬಸ್ಥರು ಹಾಗೂ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಮಂಜು ಅವರನ್ನು ಭುಜದ ಮೇಲೆ ಹೊತ್ತು ಕುಣಿದ ಸ್ನೇಹಿತರು ಖುಷಿಪಟ್ಟಿದ್ದಾರೆ. ಪ್ರಶಸ್ತಿಯೊಂದಿಗೆ ಸ್ನೇಹಿತರ ಸೆಲ್ಫಿ, ಚಪ್ಪಾಳೆ, ಅಭಿನಂದನೆಗಳ ಸುರಿಮಳೆಯಲ್ಲಿ ಮಂಜು ಮಿಂದೇಳುತ್ತಿದ್ದು, ಹಬ್ಬದ ವಾತಾವರಣ ಮೂಡಿದೆ.
ಮಂಜು ಪಾವಗಡ ಗೆಲುವಿನ ಬಗ್ಗೆ ಮಾತನಾಡಿದ ಅವರ ತಂದೆ, ನನ್ನ ಮಗ ಗೆದ್ದಿರೋದಕ್ಕೆ ಸಂತೋಷಪಡುತ್ತೇವೆ. ಒಬ್ಬ ಹಳ್ಳಿಗಾಡಿನಲ್ಲಿ ಹುಟ್ಟಿ ಬಡತನದಿಂದ ಬಂದು ಈ ಸಾಧನೆ ಮಾಡಿದ್ದಾನೆ. ಆ ಛಲದಿಂದ ವಿನ್ನರ್ ಆಗಿದ್ದಾನೆ. ಇಡೀ ದೇಶ ಮಂಜು ಪಾವಗಡ ಯಾರು ಅನ್ನೋದನ್ನ ಗುರುತಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆ ಸಂಭ್ರಮಾಚರಣೆಯ ವಿಡಿಯೋವನ್ನು ಕಣ್ತುಂಬಿಕೊಳ್ಳಿ.
(Bigg Boss Kannada 8 winner Manju Pavagada Friends fans and family members celebrating his victory)
ಇದನ್ನೂ ಓದಿ:
Manju Pavagada: ನನ್ನ ಗೆಲುವಿಗೆ ಅರವಿಂದ್ ಸ್ಫೂರ್ತಿ ಎಂದ ಬಿಗ್ ಬಾಸ್ ಕನ್ನಡ 8 ವಿಜೇತ ಮಂಜು ಪಾವಗಡ