ಬಿಗ್​ಬಾಸ್​ ಮನೆಯಲ್ಲಿ ಲಾಯರ್​ ಜಗದೀಶ್​ ಜಪ

ಬಿಗ್​ಬಾಸ್​ ಮನೆಯಲ್ಲಿ ಲಾಯರ್​ ಜಗದೀಶ್​ ಜಪ

ಮಂಜುನಾಥ ಸಿ.
|

Updated on: Oct 03, 2024 | 1:57 PM

ಬಿಗ್​ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಯಾಗಿ ಹಿರೋ ರೀತಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಲಾಯರ್ ಜಗದೀಶ್ ಯಾಕೋ ಕಳೆದ ಕೆಲ ದಿನದಿಂದ ವಿಲನ್ ರೀತಿ ವರ್ತಿಸುತ್ತಿದ್ದಾರೆ. ಬಿಗ್​ಬಾಸ್ ಮನೆ ತುಂಬೆಲ್ಲ ಅವರದ್ದೆ ಚರ್ಚೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಶುರುವಾಗಿ ಕೆಲವು ದಿನಗಳಾಗಿವೆ. ಹೀರೋ ರೀತಿ ಬಿಗ್​ಬಾಸ್ ಮನೆ ಒಳಗೆ ಹೋದ ಲಾಯರ್ ಜಗದೀಶ್ ಈಗ ಯಾಕೋ ವಿಲನ್ ರೂಪ ತಾಳಿದ್ದಾರೆ. ಮನೆಯ ಕೆಲ ಸದಸ್ಯರೊಟ್ಟಿಗೆ ಜಗಳ ಮಾಡಿರುವುದು ಮಾತ್ರವೇ ಅಲ್ಲದೆ, ಬಿಗ್​ಬಾಸ್ ಆಯೋಜಕರಿಗೆ ಮನೆಯ ಒಳಗಿನಿಂದಲೇ ಧಮ್ಕಿ ಹಾಕಿದ್ದಾರೆ. ಬಿಗ್​ಬಾಸ್ ಮನೆ ಒಡೆದು ಹಾಕುತ್ತೀನಿ, ಶೋ ಮುಚ್ಚಿಸಿಬಿಡುತ್ತೀನಿ ಎಂದಿದ್ದಾರೆ. ಈಗ ಇಡೀ ಬಿಗ್​ಬಾಸ್ ಮನೆ ಸ್ಪರ್ಧಿಗಳು ಒಂದೆಡೆಯಾದರೆ, ಲಾಯರ್ ಜಗದೀಶ್ ಒಂದೆಡೆ ಆಗಿದ್ದಾರೆ. ಮನೆಯ ಎಲ್ಲ ಸದಸ್ಯರೂ ಜಗದೀಶ್​ ಬಗ್ಗೆಯೇ ಮಾತನಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ