AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್

ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್

ಮಂಜುನಾಥ ಸಿ.
|

Updated on: Oct 08, 2024 | 5:30 PM

Share

ಬಿಗ್​ಬಾಸ್ ಕನ್ನಡ ಸೀಸನ್ 11 ಶುರುವಾಗಿ ಎರಡು ವಾರವಾಗಿವೆ. ಈ ಬಾರಿ ಮೊದಲಿನಿಂದಲೂ ಜಗಳ, ಜಿದ್ದಾ-ಜಿದ್ದುಗಳೇ ಹೆಚ್ಚಾಗಿ ಕಂಡು ಬರುತ್ತಿದೆ. ಗೆಲ್ಲಲು ಸ್ಪರ್ಧಿಗಳು ಯಾವ ಹಂತಕ್ಕೆ ಹೋಗಲು ಸಹ ತಯಾರಾಗಿದ್ದಾರೆ. ಇದೇ ಪ್ರಯತ್ನದಲ್ಲಿ ಕೆಲವು ಸ್ಪರ್ಧಿಗಳು ನಿಯಮ ಮುರಿದಿದ್ದು, ಅದಕ್ಕೆ ಎಲ್ಲರಿಗೂ ಶಿಕ್ಷೆ ಕೊಟ್ಟಿದ್ದಾರೆ ಬಿಗ್​ಬಾಸ್.

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಒಂದು ವಾರ ಕಳೆದಿದೆ. ಈ ಬಾರಿಯ ಸ್ಪರ್ಧಿಗಳು, ಜಗಳ, ಪರಸ್ಪರ ನಿಂದನೆ, ಜಿದ್ದಾ-ಜಿದ್ದಿನಲ್ಲೇ ಹೆಚ್ಚು ತೊಡಗಿದ್ದಾರೆ. ಗೆಲ್ಲುವ ಕಾರಣಕ್ಕೆ ನಿಯಮಗಳನ್ನು ಸಹ ಮುರಿದಿದ್ದಾರೆ. ಇದೀಗ ಮಂಗಳವಾರದ ಎಪಿಸೋಡ್​ನ ಹೊಸ ಪ್ರೋಮೋ ಒಂದು ಬಿಡುಗಡೆ ಆಗಿದ್ದು, ಮನೆಯ ಸ್ಪರ್ಧಿಗಳು ಮತ್ತೊಂದು ನಿಯಮ ಮುರಿದಿದ್ದಾರೆ. ನಿಯಮ ಮುರಿದ ಕೆಲವೇ ನಿಮಿಷಗಳಲ್ಲಿ ಬಿಗ್​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳಿಗೆ ಕಠಿಣವಾದ ಶಿಕ್ಷೆ ನೀಡಿದ್ದಾರೆ. ಕೆಲವರು ಮಾಡಿರುವ ತಪ್ಪಿನಿಂದ ಇಡೀ ಮನೆಯವರೇ ಶಿಕ್ಷೆಗೆ ಗುರಿಯಾಗುವಂತೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More