ಮತ್ತೆ ಜೈಲು ಸೇರಿದ ಚೈತ್ರಾ, ಕೈವಾಡದ ಆರೋಪ ನಿಜವಾ?

|

Updated on: Dec 06, 2024 | 5:40 PM

Bigg Boss Kannada: ಬಿಗ್​ಬಾಸ್ ಕನ್ನಡದಲ್ಲಿ ಚೈತ್ರಾ ಕುಂದಾಪುರ ಮತ್ತೊಮ್ಮೆ ಕಳಪೆ ಪಟ್ಟ ಹೊತ್ತುಕೊಂಡು ಜೈಲು ಸೇರಿದ್ದಾರೆ. ಈ ಹಿಂದೆಯೂ ಒಮ್ಮೆ ಇದೇ ಶೋ ನಲ್ಲಿ ಅವರು ಜೈಲು ಸೇರಿದ್ದರು.

ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಚೈತ್ರಾ ಕುಂದಾಪುರ ಮತ್ತೊಮ್ಮೆ ಜೈಲು ಸೇರಿದ್ದಾರೆ. ಇದು ಎರಡನೇ ಬಾರಿ ಈ ಮನೆಯಲ್ಲಿ ಅವರು ಜೈಲು ಸೇರುತ್ತಿದ್ದಾರೆ. ಈ ಮೊದಲೂ ಸಹ ಒಮ್ಮೆ ಕಳಪೆ ಪಟ್ಟ ತೆಗೆದುಕೊಂಡು ಅವರು ಜೈಲು ಪಾಲಾಗಿದ್ದರು. ಕೆಲ ದಿನಗಳ ಹಿಂದಷ್ಟೆ ಅವರು ನ್ಯಾಯಾಲಯದ ವಿಚಾರಣೆಗೆಂದು ಬಿಗ್​ಬಾಸ್​ನಿಂದ ಹೊರಗೆ ಬಂದಿದ್ದರು, ಕಾಕತಾಳೀಯದಂತೆ ಅದೇ ವಾರದಲ್ಲಿ ಅವರು ಬಿಗ್​ಬಾಸ್ ಮನೆಯ ಜೈಲು ಸೇರಿದ್ದಾರೆ. ಆದರೆ ಈ ಬಾರಿ ಅವರಿಗೆ ಕಳಪೆ ಪಟ್ಟ ನೀಡಿರುವುದು ಚೈತ್ರಾ ಅವರಿಗೆ ಸುತಾರಾಂ ಹಿಡಿಸಿಲ್ಲ. ಉಗ್ರಂ ಮಂಜು ಹಾಗೂ ಕೆಲವರ ಪಿತೂರಿಯಿಂದಲೇ ತಮಗೆ ಕಳಪೆ ದೊರೆತಿದೆ ಎಂದು ಚೈತ್ರಾ ಆರೋಪಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ