ಮಗನ ಸೋಲನ್ನು ಕುಮಾರಸ್ವಾಮಿ ಸಮಾವೇಶದ ನಡೆಸುವ ಮೂಲಕ ಸೆಲಿಬ್ರೇಟ್ ಮಾಡುತ್ತಾರೆಯೇ? ಚಲುವರಾಯಸ್ವಾಮಿ

ಮಗನ ಸೋಲನ್ನು ಕುಮಾರಸ್ವಾಮಿ ಸಮಾವೇಶದ ನಡೆಸುವ ಮೂಲಕ ಸೆಲಿಬ್ರೇಟ್ ಮಾಡುತ್ತಾರೆಯೇ? ಚಲುವರಾಯಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 06, 2024 | 6:12 PM

ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಮುಟ್ಟಲಾಗಲ್ಲ, ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ಗೆದ್ದಿದ್ದು ಪ್ರಧಾನಿ ಮೋದಿ ಅವರಿಂದಾಗಿ. ತಮ್ಮ ನಾಮಬಲದಿಂದ ಅವರು ಗೆಲ್ಲಬಹುದಾಗಿದ್ದರೆ, ಚನ್ನಪಟ್ಟಣದಲ್ಲಿ ಮಗನನ್ನು ಗೆಲ್ಲಿಸಿಕೊಳ್ಳುತ್ತಿದ್ದರು ಎಂದ ಚಲುವರಾಯಸ್ವಾಮಿ ಹೇಳಿದರು.

ಮೈಸೂರು: ಮಂಡ್ಯದಲ್ಲಿ ಜೆಡಿಎಸ್ ನಡೆಸಲಿರುವ ಸಮಾವೇಶವನ್ನು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಗೇಲಿ ಮಾಡಿದರು. ಮಗನ ಸೋಲಿನಿಂದ ಕುಮಾರಸ್ವಾಮಿ ಪಾಠ ಕಲಿತ ಹಾಗಿಲ್ಲ, ಅವನು ಸೋತಿದ್ದಾನೆ ಅಂತ ಸಮಾವೇಶ ಮಾಡುತ್ತಾರೆಯೇ? ನಿಖಿಲ್ ಬಗ್ಗೆ ತಾನು ಮಾತಾಡಲ್ಲ, ಅವನು ತಮ್ಮ ಮುಂದೆ ಬೆಳೆದಿರುವ ಹುಡುಗನಾಗಿರುವುದರಿಂದ ಪ್ರೀತಿಯಿದೆ, ಅದರೆ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮಗ ಅನುಭವಿಸಿದ ಸೋಲನ್ನು ಮಂಡ್ಯದಲ್ಲಿ ಸಮಾವೇಶ ನಡೆಸುವ ಮೂಲಕ ಸೆಲಿಬ್ರೇಟ್ ಮಾಡುತ್ತಾರೆಯೇ? ನಿಖಿಲ್ ಸೋಲಿಗೆ ದೇವೇಗೌಡ ಮತ್ತು ಕುಮಾರಸ್ವಾಮಿಯೇ ಕಾರಣ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಡ್ಯ: ಬಾರ್​ಗೆ ಪರವಾನಗಿ ನೀಡಲು ಲಂಚ ಕೇಳಿದ ಆರೋಪ, ಎಫ್​ಐಆರ್ ದಾಖಲಾದರೆ ಚಲುವರಾಯಸ್ವಾಮಿಗೂ ಸಂಕಷ್ಟ