ಬಿಗ್​ಬಾಸ್ ಮನೆಯಲ್ಲಿ ಹಾವು-ಏಣಿ ಆಟ ಆಡಿಸಿದ ಸುದೀಪ್, ಯಾರು ಹಾವು-ಯಾರು ಏಣಿ?

Updated on: Dec 31, 2023 | 7:28 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10ರ ಫಿನಾಲೆ ಹತ್ತಿರಕ್ಕೆ ಬಂದಿದೆ. ಸುದೀಪ್ ಅವರು ಹಾವು-ಏಣಿ ಆಟವನ್ನು ಆಡಿಸಿದ್ದಾರೆ.

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ಫಿನಾಲೆ ಹತ್ತಿರಕ್ಕೆ ಬಂದಿದೆ. ಇನ್ನು ಎರಡು-ಮೂರು ವಾರಗಳಲ್ಲಿ ವಿನ್ನರ್ ಯಾರಾಗಲಿದ್ದಾರೆ ಎಂಬುದು ಗೊತ್ತಾಗಲಿದೆ. ಫಿನಾಲೆ ಹತ್ತಿರಕ್ಕೆ ಬಂದಂತೆ ಸ್ಪರ್ಧಿಗಳ ನಡುವೆ ಜಿದ್ದಾ-ಜಿದ್ದಿ ಹೆಚ್ಚಾಗಿದೆ. ಇದೀಗ ಸುದೀಪ್ ಅವರು ವೀಕೆಂಡ್ ಪಂಚಾಯ್ತಿಯಲ್ಲಿ ಹಾವು-ಏಣಿ ಆಟ ಆಡಿಸಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ನಿಮಗೆ ಏಣಿಯಾಗಿ ನೀವು ಎತ್ತರಕ್ಕೇರಲು ಸಹಾಯ ಮಾಡಿದವರು ಯಾರು? ನಿಮ್ಮನ್ನು ಹಾವಾಗಿ ಕುಕ್ಕಿದವರು ಯಾರು? ಎಂಬ ಪ್ರಶ್ನೆಯನ್ನು ಕೇಳಿದರು. ಸ್ಪರ್ಧಿಗಳು ಸಾಲಾಗಿ ಅದಕ್ಕೆ ಉತ್ತರ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More