Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಗೆಲ್ಲುವ ಕ್ಷಮತೆ ಇರುವ ಸ್ಪರ್ಧಿ ಯಾರು? ಮನೆಯವರೇ ಕೊಟ್ಟರು ಉತ್ತರ

Bigg Boss: ಈ ಬಾರಿ ಬಿಗ್​ಬಾಸ್​ ಗೆಲ್ಲುವ ಕ್ಷಮೆತೆಯುಳ್ಳ ಸ್ಪರ್ಧಿ ಯಾರು? ಟಾಪ್ 3ರಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರು? ಮನೆಯವರೇ ಆಯ್ಕೆ ಮಾಡಿದ್ದಾರೆ.

ಬಿಗ್​ಬಾಸ್ ಗೆಲ್ಲುವ ಕ್ಷಮತೆ ಇರುವ ಸ್ಪರ್ಧಿ ಯಾರು? ಮನೆಯವರೇ ಕೊಟ್ಟರು ಉತ್ತರ
Follow us
ಮಂಜುನಾಥ ಸಿ.
|

Updated on: Dec 30, 2023 | 11:51 PM

ಬಿಗ್​ಬಾಸ್ (BiggBoss)​ ಕನ್ನಡ ಸೀಸನ್ 10 ಆರಂಭವಾಗಿ 85 ದಿನಗಳಾಗಿವೆ. ಫಿನಾಲೆಗೆ ಇನ್ನು ಕೆಲವೇ ದಿನಗಳಷ್ಟೆ ಬಾಕಿ ಇದೆ. ಮನೆಯಲ್ಲಿ ಇನ್ನೂ ಒಂಬತ್ತು ಜನರಿದ್ದಾರೆ. ಒಂಬತ್ತೂ ಜನರೂ ಗೆಲ್ಲುವ ಕ್ಷಮತೆ ಇರುವವರೇ. ಆದರೆ ಬಿಗ್​ಬಾಸ್ ಗೆಲ್ಲಲಾಗುವುದು ಒಬ್ಬರಿಗೆ ಮಾತ್ರ. ಆದರೆ ಬಿಗ್​ಬಾಸ್​ನ ಟಾಪ್ 5 ಹಾಗೂ ಟಾಪ್ 3 ನಲ್ಲಿ ಬರುವುದು ಸಹ ಕಡಿಮೆ ಸಾಧನೆಯಲ್ಲ. ಈಗ ಮನೆಯಲ್ಲಿರುವ ಒಂಬತ್ತು ಜನರಲ್ಲಿ ಟಾಪ್ 3 ನಲ್ಲಿ ಬರುವ ಕ್ಷಮತೆಯುಳ್ಳ ಸ್ಪರ್ಧಿಗಳು ಯಾರೆಂಬುದನ್ನು ಸ್ಪರ್ಧಿಗಳೇ ಹೇಳಿದ್ದಾರೆ.

ವೀಕೆಂಡ್​ ಪಂಚಾಯ್ತಿಯ ಶನಿವಾರದ ಎಪಿಸೋಡ್​ಗೆ ಬಂದಿದ್ದ ಸುದೀಪ್, ಮನೆಯ ಸ್ಪರ್ಧಿಗಳಿಗೆ ಈ ಬಾರಿ ಯಾರು ಗೆಲ್ಲಲಿದ್ದಾರೆ ಎಂದು ಸುದೀಪ್ ಪ್ರಶ್ನೆ ಮಾಡಿದರು. ಮೊದಲಿಗೆ ಎಲ್ಲರೂ ತಮ್ಮ-ತಮ್ಮ ಹೆಸರುಗಳನ್ನೇ ಹೇಳಿಕೊಂಡರು. ಆ ಬಳಿಕ ಸುದೀಪ್, ಪ್ರಶ್ನೆಯನ್ನು ತುಸುವೇ ತಿರುಚಿ, ನಿಮ್ಮನ್ನು ಹೊರತಾಗಿ ಯಾರು ಗೆಲ್ಲುತ್ತಾರೆ ಎಂದು ಹೇಳಿ ಎಂದರು. ಜೊತೆಗೆ ಟಾಪ್​ 1, ಟಾಪ್ 2 ಹಾಗೂ ಟಾಪ್ 3 ಮಾದರಿಯಲ್ಲಿ ನಿಮ್ಮ ಆಯ್ಕೆಯನ್ನು ಮುಂದಿಡಿ ಎಂದರು. ಅದಕ್ಕಾಗಿ ವಿಶೇಷ ಬೋರ್ಡ್ ಒಂದರ ವ್ಯವಸ್ಥೆಯನ್ನು ಸಹ ಮಾಡಿದರು.

ಮನೆಯ ಎಲ್ಲ ಸದಸ್ಯರು ಈ ಬಾರಿ ಬಿಗ್​ಬಾಸ್ ವಿನ್ನರ್ ಯಾರಾಗಲಿದ್ದಾರೆ ಎಂಬುದನ್ನು ತಮಗೆ ಅನ್ನಿಸಿದಂತೆ ಹೇಳಿದರು. ಟಾಪ್ 1 ಯಾರಾಗಲಿದ್ದಾರೆ? ಟಾಪ್ 2 ಯಾರಾಗಲಿದ್ದಾರೆ? ಟಾಪ್ 3 ಯಾರಾಗಲಿದ್ದಾರೆ ಎಂಬುದನ್ನು ಸ್ಪಷ್ಟನೆಯೊಟ್ಟಿಗೆ ಹೇಳಿದರು. ಅಂತಿಮವಾಗಿ ಬದಲಾವಣೆಗೂ ಅವಕಾಶವಿತ್ತು. ಮನೆಯ ಸ್ಪರ್ಧಿಗಳು ಆಯ್ಕೆಯನ್ನು ಸರಾಸರಿ ಮಾಡಿದರೆ ಟಾಪ್ 3 ಸುಲಭವಾಗಿ ಸಿಕ್ಕಿಬಿಡುತ್ತದೆ.

ಇದನ್ನೂ ಓದಿ:ಈ ವಾರ ಬಿಗ್​ಬಾಸ್ ಸ್ಪರ್ಧಿ ಪಡೆದ ಮತಗಳ ಸಂಖ್ಯೆ ಎಷ್ಟು ಗೊತ್ತೆ?

ಅಭಿಪ್ರಾಯ ಹಂಚಿಕೊಂಡ ಬಹುತೇಕರು ಸಂಗೀತಾ ಹಾಗೂ ವಿನಯ್​ರ ಹೆಸರನ್ನು ಹೇಳಿದರು. ಅದರಲ್ಲಿಯೂ ಸಂಗೀತಾ ಈ ಬಾರಿ ಟಾಪ್ 1 ಹಾಗೂ ಟಾಪ್ 2 ಪಟ್ಟಿಯಲ್ಲಿ ವಿನಯ್​ಗಿಂತಲೂ ಹೆಚ್ಚಾಗಿ ಕಾಣಿಸಿಕೊಂಡರು. ಕೆಲವರು ಮಾತ್ರ ಸಂಗೀತಾರನ್ನು ಟಾಪ್ 3 ಸ್ಥಾನದಲ್ಲಿಟ್ಟರು. ನಮ್ರತಾ, ಕಾರ್ತಿಕ್, ಮೈಖಲ್ ಅವರುಗಳು ವಿನಯ್ ಟಾಪ್ 1ರಲ್ಲಿ ಬರ್ತಾರೆ ಎಂದರು. ಸಂಗೀತಾ ಭಿನ್ನವಾಗಿ ತುಕಾಲಿ ಸಂತು ಟಾಪ್ 1ರಲ್ಲಿ ಇರಲಿದ್ದಾರೆ ಎಂದರು.

ಒಟ್ಟಾರೆ ಮನೆಯ ಸ್ಪರ್ಧಿಗಳಿಂದ ಅತಿ ಹೆಚ್ಚು ಮತ ಪಡೆದಿದ್ದು ಸಂಗೀತಾ ಮತ್ತು ವಿನಯ್, ಆ ನಂತರ ಸ್ಥಾನ ಕಾರ್ತಿಕ್​ ಅದರ ಬಳಿಕ ನಮ್ರತಾ, ಆ ಬಳಿಕ ತನಿಷಾ, ಡ್ರೋನ್ ಪ್ರತಾಪ್ ಅವರು ಟಾಪ್ 3 ಪಟ್ಟಿಯಲ್ಲಿ ಒಂದು ಬಾರಿ ಮಾತ್ರ ಕಾಣಿಸಿಕೊಂಡರು. ವರ್ತೂರು ಸಂತು ಸಹ ಟಾಪ್ 3ನಲ್ಲಿ ಒಂದು ಬಾರಿ ಮಾತ್ರ ಕಾಣಿಸಿಕೊಂಡರು. ತುಕಾಲಿ ಸಂತು ಎರಡು ಬಾರಿ ಟಾಪ್ 1 ರಲ್ಲಿ ಒಂದು ಬಾರಿ ಟಾಪ್ 3ರಲ್ಲಿ ಮತ ಪಡೆದರು. ಡ್ರೋನ್ ಪ್ರತಾಪ್ ಮತ್ತು ಮೈಖಲ್ ಕೇವಲ ಒಂದು ಮತವನ್ನಷ್ಟೆ ಪಡೆದುಕೊಂಡರು.

ಒಂದೂ ಮತ ಪಡೆಯದೇ ಇರುವ ಏಕೈಕ ಸ್ಪರ್ಧಿಯಾಗಿ ಸಿರಿ ಉಳಿದು ಕೊಂಡರು. ಅವರನ್ನು ಟಾಪ್ 3 ಪಟ್ಟಿಗೆ ಪರಿಗಣನೆಯನ್ನೇ ಮಾಡಲಿಲ್ಲ ಮನೆಯ ಸ್ಪರ್ಧಿಗಳು. ಇದು ಸ್ವತಃ ಸಿರಿ ಅವರಿಗೆ ಬೇಸರವಾಯ್ತು. ಇನ್ನು ಇರುವ ಕಡಿಮೆ ಸಮಯದಲ್ಲಿ ಚೆನ್ನಾಗಿ ಆಡುತ್ತೇನೆ, ಉತ್ತಮ ಪ್ರದರ್ಶನ ನೀಡುತ್ತೇನೆ ಎಂದರು ಸಿರಿ. ಆದರೆ ಸಮಯ ನಿಜಕ್ಕೂ ಕಡಿಮೆ ಇದೆ, ಸ್ಪರ್ಧೆ ಬಲು ಜೋರಾಗಿದೆ. ಫಿನಾಲೆಗೆ ಕೆಲವೇ ದಿನಗಳಿದ್ದು ಟಾಪ್ 3 ಯಾರು? ಗೆಲ್ಲುವರು ಯಾರು? ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ