Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಸ್ಪರ್ಧಿ ಮೇಲೆ ಕಳ್ಳತನದ ಆರೋಪ, ಪ್ರಕರಣ ದಾಖಲು

Bigg Boss: ಬಿಗ್​ಬಾಸ್ ಸ್ಪರ್ಧಿ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿದೆ. ಬೆಲೆ ಬಾಳುವ ಬಟ್ಟೆ, ಆಭರಣಗಳನ್ನು ಹೊತ್ತೊಯ್ದಿದ್ದಾರೆಂದು ದೂರು ದಾಖಲಾಗಿದೆ.

ಬಿಗ್​ಬಾಸ್ ಸ್ಪರ್ಧಿ ಮೇಲೆ ಕಳ್ಳತನದ ಆರೋಪ, ಪ್ರಕರಣ ದಾಖಲು
Follow us
ಮಂಜುನಾಥ ಸಿ.
|

Updated on: Dec 31, 2023 | 3:28 PM

ಬಿಗ್​ಬಾಸ್ (BiggBoss) ಸ್ಪರ್ಧಿಯೊಬ್ಬರ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿದೆ. ಈ ಬಗ್ಗೆ ಪ್ರಕರಣದ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಪ್ರಸಾರವಾಗುತ್ತಿರುವ ಹಿಂದಿಯ ಬಿಗ್​ಬಾಸ್ 17ರ ಸ್ಪರ್ಧಿ ಸನಾ ರಯೀಸ್ ಖಾನ್ ವಿರುದ್ಧ ಸೆಲೆಬ್ರಿಟಿ ಸ್ಪೈಲಿಸ್ಟ್ ಆಗಿರುವ ಖುಷ್ಬೂ ರಾವತ್ ಕಳ್ಳತನದ ಆರೋಪ ಹೊರಿಸಿದ್ದು, ದೂರು ಸಹ ದಾಖಲಿಸಿದ್ದಾರೆ.

ಸ್ವತಃ ವಕೀಲೆ ಸಹ ಆಗಿರುವ ಸನಾ ರಯೀಸ್ ಖಾನ್ ಬಿಗ್​ಬಾಸ್ 17 ರ ಸ್ಪರ್ಧಿಯಾಗಿ ಕೆಲ ವಾರ ಮನೆಯಲ್ಲಿದ್ದರು. ಕೆಲ ವಾರಗಳ ಹಿಂದೆ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಸನಾ ರಯೀಸ್ ಖಾನ್ ಬಿಗ್​ಬಾಸ್ ಮನೆಯಲ್ಲಿದ್ದಾಗ ಅವರಿಗೆ ಉಡುಪು ಹಾಗೂ ಆಭರಣಗಳನ್ನು ಸ್ಟೈಲಿಸ್ಟ್ ಖುಷ್ಬೂ ರಾವತ್ ಕಳಿಸಿಕೊಡುತ್ತಿದ್ದರಂತೆ. ದುಬಾರಿ ಬೆಲೆಯ ಆಭರಣಗಳು, ಬಟ್ಟೆಗಳನ್ನು ಸನಾ ರಯೀಸ್ ಖಾನ್ ಅವರಿಗಾಗಿ ಖುಷ್ಬು ಅವರು ಕಳಿಸಿದ್ದರಂತೆ ಆದರೆ ಬಿಗ್​ಬಾಸ್​ನಿಂದ ಹೊರಗೆ ಬಂದ ಬಳಿಕ ಆ ಬಟ್ಟೆಗಳನ್ನು ಆಭರಣಗಳನ್ನು ಸನಾ ರಯೀಸ್ ಖಾನ್ ಮರಳಿಸಿಲ್ಲವಂತೆ.

ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಖುಷ್ಬೂ ರಾವತ್, ‘‘ಕಳೆದ ನಾಲ್ಕು ವರ್ಷಗಳಿಂದಲೂ ನಾನು ಹಲವು ಬಿಗ್​ಬಾಸ್ ಸ್ಪರ್ಧಿಗಳಿಗೆ ಉಡುಪುಗಳನ್ನು ನೀಡುತ್ತಾ ಬಂದಿದ್ದೇನೆ. ಬೇರೆ-ಬೇರೆ ಕಡೆಗಳಿಂದ ಉಡುಪುಗಳನ್ನು ತರಿಸಿಕೊಂಡು ಅದಕ್ಕೆ ವರ್ಕ್ ಮಾಡಿಸಿ, ಅದಕ್ಕೆ ಒಪ್ಪುವ ಆಭರಣಗಳನ್ನು ಹುಡುಕುವುದು, ಮಾಡಿಸುವುದು ಇಷ್ಟೆಲ್ಲ ಶ್ರಮಪಟ್ಟು ಈ ಕೆಲಸ ಮಾಡುತ್ತಾ ಬರುತ್ತಿದ್ದೇನೆ. ಆದರೆ ಈ ವರ್ಷ ಸನಾ ರಯೀಸ್ ಖಾನ್ ಅವರಿಂದ ಆದಷ್ಟು ಕೆಟ್ಟ ಅನುಭವ ಯಾವಾಗಲೂ ಆಗಿಲ್ಲ’’ ಎಂದಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಗೆಲ್ಲುವ ಕ್ಷಮತೆ ಇರುವ ಸ್ಪರ್ಧಿ ಯಾರು? ಮನೆಯವರೇ ಕೊಟ್ಟರು ಉತ್ತರ

‘‘ಹಲವು ದುಬಾರಿ ಉಡುಗೆಗಳು, ಆಭರಣಗಳನ್ನು ನಾವು ಕಳಿಸಿಕೊಟ್ಟಿದ್ದೆವು. ಬಿಗ್​ಬಾಸ್​ ಮನೆಯಿಂದ ಹೊರಗೆ ಬಂದ ಬಳಿಕ ಆ ಬಟ್ಟೆಗಳು, ಆಭರಣಗಳನ್ನು ಸನಾ ರಯೀಸ್ ಖಾನ್ ಮರಳಿಸಿಲ್ಲ, ಅವರಿಗೆ ಅವರ ಸಹಾಯಕರಿಗೆ ಹಲವು ಬಾರಿ ಮನವಿ ಮಾಡಿದ ಬಳಿಕವೂ ನಮ್ಮ ವಸ್ತುಗಳು ನಮಗೆ ಸೇರಿಲ್ಲ. ಹಾಗಾಗಿ ಕಾನೂನಿನ ಮೊರೆ ಹೋಗದೆ ಬೇರೆ ದಾರಿಯೇ ಇಲ್ಲ. ಸನಾ ರಯೀಸ್ ಖಾನ್ ಅವರನ್ನು ಪ್ರೀತಿಸುವವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ’’ ಎಂದು ಬರೆದುಕೊಂಡಿದ್ದಾರೆ.

ಸನಾ ರಯೀಸ್ ಖಾನ್, ಬಿಗ್​ಬಾಸ್ ಮನೆಯ ವಿವಾದಾತ್ಮಕ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅಂಕಿತಾ ಲೋಖಂಡೆ ಪತಿ ವಿಕ್ಕಿ ಜೈನ್ ಜೊತೆ ಆತ್ಮೀಯವಾಗಿದ್ದಿದ್ದಕ್ಕೆ ಇವರು ಹೊರಗೆ ಚರ್ಚೆ ಹುಟ್ಟು ಹಾಕಿದ್ದರು. ಮನೆಯಲ್ಲಿಯೂ ಸಹ ಇದೇ ಕಾರಣಕ್ಕೆ ಇತರೆ ಸ್ಪರ್ಧಿಗಳಿಂದ ವಿರೋಧಕ್ಕೂ ಒಳಗಾದರು. ಅಲ್ಲದೆ, ಮನೆ ಕೆಲಸ ಮಾಡದೆ, ಮನೆಯವರಿಗೆ ರೇಷನ್ ಸಿಗದಂತೆ ಮಾಡಿದ್ದು ಸಹ ಸ್ಪರ್ಧಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ