Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಗೆದ್ದವರಿಗೆ ಏನೇನು ಸಿಗಲಿದೆ, ರನ್ನರ್ ಅಪ್​ಗೆ ಸಿಗುವುದೇನು? ಸುದೀಪ್ ನೀಡಿದರು ಮಾಹಿತಿ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಗೆದ್ದ ಸ್ಪರ್ಧಿಗೆ ಎಷ್ಟು ಮೊತ್ತ ಹಣ ಬಹುಮಾನವಾಗಿ ಸಿಗಲಿದೆ. ಅದರ ಜೊತೆಗೆ ಉಡುಗೊರೆಯಾಗಿ ಏನು ಸಿಗಲಿದೆ? ರನ್ನರ್ ಅಪ್​ಗೆ ಸಿಗುವುದೇನು? ಸುದೀಪ್ ನೀಡಿದರು ಮಾಹಿತಿ.

ಬಿಗ್​ಬಾಸ್ ಗೆದ್ದವರಿಗೆ ಏನೇನು ಸಿಗಲಿದೆ, ರನ್ನರ್ ಅಪ್​ಗೆ ಸಿಗುವುದೇನು? ಸುದೀಪ್ ನೀಡಿದರು ಮಾಹಿತಿ
Follow us
ಮಂಜುನಾಥ ಸಿ.
|

Updated on: Dec 30, 2023 | 11:32 PM

ಹೊರಗೆ ಸಾಮಾನ್ಯ ವ್ಯಕ್ತಿಯಾಗಿದ್ದರೂ ಸಹ ಬಿಗ್​ಬಾಸ್ (BiggBoss) ಮನೆಗೆ ಒಮ್ಮೆ ಹೋಗಿ ಬಂದವರು ಸೆಲೆಬ್ರಿಟಿಗಳಾಗಿಬಿಡುತ್ತಾರೆ. ಮನೊರಂಜನಾ ಕ್ಷೇತ್ರದಲ್ಲಿ ಹಲವು ಅವಕಾಶಗಳು ಅವರನ್ನು ಅರಸಿ ಬರುತ್ತವೆ. ಇದು ಬಿಗ್​ಬಾಸ್ ಮನೆಗೆ ಹೋದವರಿಗೆ ಹೋಗಿ ಗೆದ್ದವರಿಗೆ ಆಗುವ ಪ್ರಮುಖ ಲಾಭ. ಇದರ ಹೊರತಾಗಿ, ರಿಯಾಲಿಟಿ ಶೋ ಆಯೋಜಕರು ಸಹ ಬಿಗ್​ಬಾಸ್ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನವನ್ನೇ ಆರಂಭದಿಂದಲೂ ನೀಡುತ್ತಾ ಬಂದಿದ್ದಾರೆ. ಪ್ರತಿ ಬಾರಿಯೂ ಬಿಗ್​ಬಾಸ್ ಗೆದ್ದ ಬಳಿಕ ಆ ವಿಷಯ ಬಹಿರಂಗವಾಗುತ್ತದೆ. ಈ ಬಾರಿ ತುಸು ಮುಂಚೆಯೇ ಸುದೀಪ್ ಅವರು ಚಾಂಪಿಯನ್ ಆದವರಿಗೆ ಏನು ಸಿಗಲಿದೆ ಎಂದು ಹೇಳಿದ್ದಾರೆ.

ವೀಕೆಂಡ್ ಪಂಚಾಯ್ತಿಯ ಶನಿವಾರದ ಎಪಿಸೋಡ್​ನಲ್ಲಿ ಯಾರು ಈ ಬಾರಿ ಟಾಪ್ 3 ನಲ್ಲಿ ಇರಬಹುದು ಎಂದು ಸುದೀಪ್ ಪ್ರಶ್ನೆ ಕೇಳಿದರು. ಪ್ರತಿಯೊಬ್ಬರೂ ಸಹ ತಮಗೆ ತೋಚಿದ ಮೂರು ಹೆಸರುಗಳನ್ನು ಹೇಳಿ ಅದಕ್ಕೆ ಕಾರಣ ನೀಡಿದರು. ಆದರೆ ಸ್ಪರ್ಧಿಗಳ ಆಯ್ಕೆ ಸುದೀಪ್​ಗೆ ಅಷ್ಟು ಇಷ್ಟವಾಗಲಿಲ್ಲ. ಪ್ರತಿಯೊಬ್ಬ ಸ್ಪರ್ಧಿಯೂ ತಮಗೆ ಇಷ್ಟವಾದವರ ಹೆಸರುಗಳನ್ನು ಹೇಳಿದ್ದಾರೆಯೇ ಹೊರತು ಯಾರು ಗೆಲ್ಲುತ್ತಾರೆ ಎಂದು ಹೇಳಿಲ್ಲ ಎಂದರು. ಪ್ರತಿ ಸ್ಪರ್ಧಿ ಯಾರಿಬ್ಬರ ಹೆಸರು ತೆಗೆದುಕೊಳ್ಳಲಿದ್ದಾರೆ ಎಂಬುದು ಸುಲಭವಾಗಿ ಊಹೆ ಮಾಡಬಹುದಿತ್ತು ಎಂದ ಸುದೀಪ್, ಸ್ಪರ್ಧಿಗಳಲ್ಲಿ ಗೆಲ್ಲುವ ಹಂಬಲ ಮೂಡಿಸಲೆಂದು ಗುಟ್ಟೊಂದನ್ನು ರಟ್ಟು ಮಾಡಿದರು.

ಈ ಬಾರಿ ಬಿಗ್​ಬಾಸ್ ಟ್ರೋಫಿ ಗೆದ್ದವರಿಗೆ ಕಾನ್ಫಿಡೆಂಟ್ ಗ್ರೂಪ್​ನಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ಮಾರುತಿ ಸಂಸ್ಥೆಯ ಬ್ರೆಜಾ ಕಾರು ಉಡುಗೊರೆಯಾಗಿ ಸಿಗಲಿದೆ. ಅದಾದ ಬಳಿಕ ಎಲೆಕ್ಟ್ರಿಕ್ ಸ್ಕೂಟರ್ ಸಹ ಸಿಗಲಿದೆ ಎಂದರು. ಆ ಬಳಿಕ ಈ ಬಹುಮಾನದ ಮೊತ್ತ ನಿಮಗೆಲ್ಲ ಯಾಕೆ ಇಷ್ಟು ಮುಖ್ಯ ಎಂದು ಕೇಳಿ ಉತ್ತರ ಪಡೆದುಕೊಂಡರು. ಡ್ರೋನ್ ಪ್ರತಾಪ್ ಗೆ ತನ್ನ ತಂದೆಯ ಸಾಲ ತೀರಿಸಬೇಕಿತ್ತು, ಕಾರ್ತಿಕ್​ಗೆ ಅಮ್ಮನಿಗಾಗಿ ಮನೆಯೊಂದನ್ನು ಕಟ್ಟಿಕೊಳ್ಳಬೇಕಿದೆ. ತುಕಾಲಿ ಸಂತುಗೆ ನೆಮ್ಮದಿಯ ಜೀವನಕ್ಕಾಗಿ, ಜೀವನದಲ್ಲಿ ಸ್ಟೆಬಿಲಿಟಿಗಾಗಿ ಹಣ ಬೇಕಿದೆ. ಹೀಗೆ ಹಲವರು ಹಲವು ರೀತಿಯ ಕಾರಣಗಳನ್ನು ಹೇಳಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಬಂದ ಕಾಂತಾರ ಬೆಡಗಿ ಸಪ್ತಮಿ ಗೌಡ, ಕಾರಣವೇನು?

ಬಳಿಕ ಮಾತನಾಡಿದ ಸುದೀಪ್, ಈಗ ನಾನು ಈಗ ಹೇಳಿರುವುದು 50 ಪ್ರತಿಷತಃ ಮಾತ್ರ. ಇನ್ನೂ 50 ಪ್ರತಿಷತಃ ಹೇಳಿಲ್ಲ. ಎಲ್ಲರೂ ನಿಮ್ಮ ಶಕ್ತಿ ಮೀರಿ ಗೆಲ್ಲಲು ಪ್ರಯತ್ನಿಸಿ, ನಾವು ಸುಮ್ಮನಿದ್ದರೂ ಜನ ನಮಗಾಗಿ ಮತ ಹಾಕುತ್ತಾರೆ ಎಂಬುದೆಲ್ಲ ಸುಳ್ಳು. ಜನ ಯಾರು ಚೆನ್ನಾಗಿ ಆಡುತ್ತಾರೆಯೇ ಆವರಿಗೆ ಮಾತ್ರವೇ ಮತ ಹಾಕುತ್ತಾರೆ. ಆಟದಲ್ಲಿ ಮಾತ್ರವೇ ನಿಮ್ಮ ಗಮನ ಇರಲಿ, ಆಟಗಳು, ನಿರ್ಧಾರಗಳು ಇನ್ನು ಮುಂದೆ ಇನ್ನಷ್ಟು ಟಫ್ ಆಗಲಿವೆ ಎಂದು ಸೂಚನೆಯನ್ನೂ ಸಹ ನೀಡಿದರು.

ಬಿಗ್​ಬಾಸ್ 85 ದಿನ ಮುಗಿದಿದ್ದು ಫಿನಾಲೆಗೆ ಹತ್ತಿರವಾಗುತ್ತಿದೆ. ಈ ಬಾರಿ ಟಿಆರ್​ಪಿ ಚೆನ್ನಾಗಿರುವ ಕಾರಣ ಬಿಗ್​ಬಾಸ್​ ಅನ್ನು ಇನ್ನೂ ಕೆಲವು ವಾರಗಳ ಕಾಲ ಮುಂದಕ್ಕೆ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಂದೂಡಿದರೂ ಸಹ ಒಂದು ಅಥವಾ ಎರಡು ವಾರಗಳ ಕಾಲ ಮಾತ್ರವೇ ಮುಂದೂಡುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು