AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಬಿಗ್​ಬಾಸ್ ಸ್ಪರ್ಧಿ ಪಡೆದ ಮತಗಳ ಸಂಖ್ಯೆ ಎಷ್ಟು ಗೊತ್ತೆ?

Bigg Boss Kannada: ಈ ವಾರ ಸ್ಪರ್ಧಿಯೊಬ್ಬರು ಪಡೆದ ಅತಿ ಹೆಚ್ಚು ಮತಗಳ ಸಂಖ್ಯೆ ಎಷ್ಟೆಂಬುದನ್ನು ಸುದೀಪ್ ಬಹಿರಂಗಪಡಿಸಿದ್ದಾರೆ.

ಈ ವಾರ ಬಿಗ್​ಬಾಸ್ ಸ್ಪರ್ಧಿ ಪಡೆದ ಮತಗಳ ಸಂಖ್ಯೆ ಎಷ್ಟು ಗೊತ್ತೆ?
ಸುದೀಪ್
ಮಂಜುನಾಥ ಸಿ.
|

Updated on: Dec 30, 2023 | 8:48 PM

Share

ವಾರಗಳು ಕಳೆದಂತೆ ಬಿಗ್​ಬಾಸ್ (BiggBoss) ಮನೆಯಲ್ಲಿ ಸ್ಪರ್ಧೆ ಕಠಿಣವಾಗುತ್ತಾ ಸಾಗುತ್ತಿದೆ. ಒಳ್ಳೆಯ ಸ್ಪರ್ಧಿಗಳೇ ಮನೆಯಿಂದ ಹೊರಗೆ ಹೋಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಗೆಲ್ಲುವ ಸ್ಪರ್ಧಿಗಳಲ್ಲಿಯೂ ಸಹ ತೀವ್ರ ಪೈಪೋಟಿ ಏರ್ಪಟ್ಟಿದೆ. ಫಿನಾಲೆಗೆ ಕೆಲವೇ ವಾರಗಳು ಇವೆ, ಆದರೆ ಇಂಥಹವರೇ ಗೆಲ್ಲುತ್ತಾರೆ ಎಂದು ಸ್ಪಷ್ಟವಾಗಿ ಹೇಳಲಾಗದ ಪರಿಸ್ಥಿತಿ ಇದೆ. ನಾಮಿನೇಷನ್​ ಆದ ಸ್ಪರ್ಧಿಗಳಿಗೆ ಜನರು ಸಹ ದೊಡ್ಡ ಸಂಖ್ಯೆಯಲ್ಲಿ ಮತ ಹಾಕುತ್ತಿದ್ದಾರೆ. ಜನ ಹಾಕುವ ಮತಗಳ ಸಂಖ್ಯೆ ವಾರದಿಂದ ವಾರಕ್ಕೆ ದುಪ್ಪಟ್ಟಾಗುತ್ತಾ ಬರುತ್ತಿದೆ. ಈ ವಾರ ಅತಿ ಹೆಚ್ಚು ಮತ ಪಡೆದ ಸ್ಪರ್ಧಿಗೆ ಬಂದಿರುವ ಮತಗಳ ಸಂಖ್ಯೆ ಎಷ್ಟು ಲಕ್ಷಗಳು ಗೊತ್ತೆ?

ಕಳೆದ ವಾರಾಂತ್ಯದಲ್ಲಿ ಸುದೀಪ್, ಬಿಗ್​ಬಾಸ್​ಗೆ ಬರಲಾಗಿರಲಿಲ್ಲ. ಕೆಸಿಸಿಯಲ್ಲಿ ಬ್ಯುಸಿ ಇದ್ದ ಕಾರಣಕ್ಕೆ ಅವರು ಗೈರಾಗಿದ್ದರು. ಅವರ ಬದಲಿಗೆ ಬಿಗ್​ಬಾಸ್ ಮನೆಯ ಒಳಗೆ ಶ್ರುತಿ, ಶುಭಾ ಪೂಂಜಾ ಹಾಗೂ ಶೈನ್ ಶೆಟ್ಟಿ ಬಂದಿದ್ದರು. ಎಲಿಮಿನೇಷನ್ ಸಹ ನಡೆದು ಅವಿನಾಶ್ ಶೆಟ್ಟಿ ಮನೆಯಿಂದ ಹೊರಗೆ ಹೋದರು. ಈ ವಾರ ಸುದೀಪ್ ವೀಕೆಂಡ್​ ಪಂಚಾಯಿತಿಗೆ ಮರಳಿದ್ದಾರೆ. ಇದೀಗ ಬಿಡುಗಡೆ ಆಗಿರುವ ಪ್ರೋಮೋ ಪ್ರಕಾರ, ಈ ವಾರ ಸ್ಪರ್ಧಿಯೊಬ್ಬರು ಪಡೆದಿರುವ ಮತಗಳ ಸಂಖ್ಯೆಯನ್ನು ಮನೆ ಮಂದಿಯ ಮುಂದೆ ಹೇಳಿದ್ದಾರೆ.

ವರ್ತೂರು ಸಂತೋಷ್ ಅವರ ಮಾತುಗಳ ಬಗ್ಗೆ ಶನಿವಾರದ ಎಪಿಸೋಡ್​ನಲ್ಲಿ ಚರ್ಚೆಯಾಯ್ತು. ಕಾರ್ತಿಕ್ ಅವರು ಸದೀಪ್ ಜೊತೆ ಚರ್ಚಿಸುತ್ತಾ, ‘‘ಏನು ಕೇಳಿದರು ನಾನು ನಿಮಗೆ ಕ್ಲಾರಿಟಿ ಕೊಡಬೇಕಿಲ್ಲ, ನಾನು ಜನರಿಗೆ ಕ್ಲಾರಿಟಿ ಕೊಟ್ಟರೆ ಸಾಕು’’ ಎಂದು ಹೇಳುತ್ತಾರೆ. ಏನು ಕೇಳಿದರೂ ‘ಜನ ನೋಡಿಕೊಳ್ತಾರೆ’ ಎಂದು ಹೇಳುತ್ತಾರೆ. ಎಲ್ಲದಕ್ಕೂ ಜನರ ಹೆಸರು ಹೇಳಿ ತಾವು ಉತ್ತರ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಾರೆ’ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಬಂದ ಕಾಂತಾರ ಬೆಡಗಿ ಸಪ್ತಮಿ ಗೌಡ, ಕಾರಣವೇನು?

ವರ್ತೂರು ಅವರ ಈ ವರ್ತನೆಯನ್ನು ಗಮನಿಸಿದ್ದ ಸುದೀಪ್ ಸಹ, ವರ್ತೂರು ಅವರನ್ನುದ್ದೇಶಿಸಿ, ನಾನು ಹೇಗೆ ಆಟವಾಡಿದರು ಜನ ಮತ ಹಾಕ್ತಾರೆ, ಜನ ನನ್ನನ್ನು ಗೆಲ್ಲಿಸ್ತಾರೆ ಎಂಬ ಭ್ರಮೆಯಲ್ಲಿ ಇದ್ದೀರಿ ಅನ್ನಿಸುತ್ತದೆ’’ ಎಂದಿದ್ದಾರೆ. ಮುಂದುವರೆದು ಈ ವಾರ ನಾಮಿನೇಟ್ ಆದ ಸ್ಪರ್ಧಿಯೊಬ್ಬರು 72.83 ಲಕ್ಷ ಮತಗಳನ್ನು ತೆಗೆದುಕೊಂಡಿದ್ದಾರೆ ಎಂದ ಸುದೀಪ್. ಈ ಮತಗಳು ಬಂದಿರುವುದು ವರ್ತೂರು ಸಂತೋಷ್​ಗೆ ಅಲ್ಲ ಎಂದರು.

ಅಂದಹಾಗೆ, ಕೆಲ ವಾರಗಳ ಮುಂಚೆ, ವರ್ತೂರು ಸಂತೋಷ್ ಅವರು ತಾವು ಬಿಗ್​ಬಾಸ್​ನಿಂದ ಹೊರಗೆ ಹೋಗುವ ಬಗ್ಗೆ ಮಾತನಾಡಿದ್ದಾಗ ಅವರಿಗೆ ಸಿಕ್ಕಿದ್ದ ಮತಗಳ ಸಂಖ್ಯೆಯನ್ನು ಸುದೀಪ್ ಹೇಳಿದ್ದರು. ಆ ವಾರ ವರ್ತೂರು ಸಂತೋಷ್​ಗೆ 32 ಲಕ್ಷಕ್ಕೂ ಹೆಚ್ಚು ಮತಗಳು ಬಂದಿದ್ದವು. ಆ ವಾರದಲ್ಲಿ ಅವರಷ್ಟು ಮತಗಳು ಇನ್ಯಾರಿಗೂ ಬಂದಿರಲಿಲ್ಲ. ಆದರೆ ಈ ಬಾರಿ ಮತಗಳ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ ಆ ದುಪ್ಪಟ್ಟಾಗಿರುವ ಮತಗಳು ಬಂದಿರುವುದು ವರ್ತೂರು ಸಂತೋಷ್​ಗೆ ಅಲ್ಲ.

ಈ ವಾರ ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ತುಕಾಲಿ ಸಂತು, ಸಂಗೀತಾ ಶೃಂಗೇರಿ, ಸಿರಿ, ಮೈಖಲ್, ತನಿಷಾ ಅವರುಗಳು ನಾಮಿನೇಟ್ ಆಗಿದ್ದು, ಇವರಲ್ಲಿ ಒಬ್ಬ ಸ್ಪರ್ಧಿಗೆ 72.83 ಲಕ್ಷ ಮತ ದೊರೆತಿದೆ. ಆದರೆ ಆ ಮತ ದೊರೆತಿರುವುದು ಯಾರಿಗೆ ಎಂಬುದನ್ನು ಸುದೀಪ್ ಹೇಳಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ