ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಬಿಗ್ ಬಾಸ್ ಹಂಸಾ

Edited By:

Updated on: May 01, 2026 | 8:13 PM

‘ವಸುದೇವ ಕುಟುಂಬ’ ಧಾರಾವಾಹಿ ತಂಡದ ಕಿರಿಕ್ ಬೀದಿಗೆ ಬಂದಿದೆ. ನಿರ್ಮಾಪಕ ಅನಿಲ್ ವಿರುದ್ಧ ಕಲಾವಿದರು ಮತ್ತು ತಂತ್ರಜ್ಞರು ತಿರುಗಿ ಬಿದ್ದಿದ್ದಾರೆ. ತಿಂಗಳುಗಳಿಂದ ಕೆಲಸ ಮಾಡಿದ್ದಕ್ಕೆ ಸಂಬಳ ನೀಡಿಲ್ಲ ಎಂದು ಆರೋಪಿಸಲಾಗಿದೆ. ‘ಬಿಗ್ ಬಾಸ್ ಕನ್ನಡ’ ಖ್ಯಾತಿಯ ನಟಿ ಹಂಸಾ ಅವರು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ.

‘ವಸುದೇವ ಕುಟುಂಬ’ (Vasudeva Kutumba) ಧಾರಾವಾಹಿ ತಂಡದ ಕಿರಿಕ್ ಬೀದಿಗೆ ಬಂದಿದೆ. ನಿರ್ಮಾಪಕ ಅನಿಲ್ ವಿರುದ್ಧ ಕಲಾವಿದರು ಮತ್ತು ತಂತ್ರಜ್ಞರು ತಿರುಗಿ ಬಿದ್ದಿದ್ದಾರೆ. ತಿಂಗಳುಗಳಿಂದ ಕೆಲಸ ಮಾಡಿದ್ದಕ್ಕೆ ಸಂಬಳ ನೀಡಿಲ್ಲ ಎಂದು ಆರೋಪಿಸಲಾಗಿದೆ. ‘ಬಿಗ್ ಬಾಸ್ ಕನ್ನಡ’ ಖ್ಯಾತಿಯ ನಟಿ ಹಂಸಾ ಅವರು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ. ‘ನಾನು ಆ ಧಾರಾವಾಹಿಯಿಂದ ಹೊರಗೆ ಬಂದೆ. ನಮಗೆ ಗೌರವ ಇಲ್ಲದ ಜಾಗದಲ್ಲಿ ನಾನು ಕೆಲಸ ಮಾಡಲ್ಲ. ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ನಾವು ಬಿಟ್ಟು ಬಂದಿದ್ದೇವೆ. ಅನಿಲ್ ಟಿಆರ್​ಪಿ ಫ್ರಾಡ್ ಮಾಡಿದ್ದಾನೆ. ಇಂಥ ಒಬ್ಬ ನಿರ್ಮಾಪಕನಿಂದ ಇನ್ನುಳಿದವರಿಗೂ ಕೆಟ್ಟ ಹೆಸರು. ನನಗೆ 3 ಲಕ್ಷ ರೂಪಾಯಿ ಬರಬೇಕಿದೆ. ನನಗೆ ಆ ಹಣ ಬರದಿದ್ದರೂ ಪರವಾಗಿಲ್ಲ. ಅವನ ಮಾನ ಮರ್ಯಾದೆ ತೆಗೆಯದೇ ಬಿಡಲ್ಲ. ಇನ್ನೊಮ್ಮೆ ಅವನು ಯಾರಿಗೂ ಮೋಸ ಮಾಡಬಾರದು. 10 ವರ್ಷ ಆದರೂ ಪರವಾಗಿಲ್ಲ. ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ’ ಎಂದು ಹಂಸಾ (Hamsa) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More