ಫಿನಾಲೆಗೂ ಮೊದಲು ಫ್ಯಾಮಿಲಿ ವೀಕ್; ಬಿಗ್ ಬಾಸ್ಗೆ ಬಂದ ಸ್ಪರ್ಧಿಗಳ ಕುಟುಂಬದವರು
ವರ್ತೂರು ಸಂತೋಷ್ ತಾಯಿ, ನಮ್ರತಾ ತಾಯಿ ದೊಡ್ಮನೆ ಒಳಗೆ ಆಗಮಿಸಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
‘ಬಿಗ್ ಬಾಸ್’ ಇನ್ನು ಕೆಲವೇ ವಾರಗಳಲ್ಲಿ ಪೂರ್ಣಗೊಳ್ಳಲಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಸುಮಾರು 80 ದಿನಗಳ ಕಾಲ ಕುಟುಂಬವನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕುಟುಂಬದವರನ್ನು ಭೇಟಿ ಮಾಡುವ ಅವಕಾಶ ಒದಗಿಸಲಾಗಿದೆ. ಈ ವಾರ ಫ್ಯಾಮಿಲಿ ವೀಕ್. ಸ್ಪರ್ಧಿಗಳ ಅಮ್ಮಂದಿರು ಬಿಗ್ ಬಾಸ್ಗೆ ಬಂದಿದ್ದಾರೆ. ವರ್ತೂರು ಸಂತೋಷ್ ತಾಯಿ, ನಮ್ರತಾ ತಾಯಿ ದೊಡ್ಮನೆ ಒಳಗೆ ಆಗಮಿಸಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇಡೀ ವಾರ ಭಾವನಾತ್ಮಕವಾಗಿ ಇರಲಿದೆ. ಡ್ರೋನ್ ಪ್ರತಾಪ್ (Drone Prathap) ತಂದೆಯ ಆಗಮನಕ್ಕೆ ಎಲ್ಲರೂ ಕಾದಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ