ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ

Updated on: Nov 26, 2024 | 8:00 PM

Bigg Boss Kannada: ಬಿಗ್​ಬಾಸ್​ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ ಮತ್ತು ರಜತ್​ ಇಬ್ಬರಲ್ಲಿ, ರಜತ್ ಕೆಲವೇ ದಿನಗಳಲ್ಲಿ ಗಮನ ಸೆಳೆದಿದ್ದಾರೆ. ಆದರೆ ಶೋಭಾ ಶೆಟ್ಟಿ ಆರಂಭದಲ್ಲಿ ಗಮನ ಸೆಳೆದರೂ ಆ ನಂತರ ಯಾಕೋ ಮಂಕಾಗಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ ಈ ಹಿಂದೆ ತೆಲುಗು ಬಿಗ್​ಬಾಸ್​ನಲ್ಲಿ ಆಡಿ ಬಂದಿದ್ದಾರೆ. ಅವರಿಗೆ ಬಿಗ್​ಬಾಸ್​ ಆಟದ ಅನುಭವ ಇದೆ. ಆದರೆ ಶೋಭಾ ಶೆಟ್ಟಿ ಮೊದಲ ಕೆಲ ದಿನ ಫುಲ್ ಜೋಶ್​ನಲ್ಲಿದ್ದರಾದರೂ ಆ ನಂತರ ಯಾಕೋ ಮಂಕಾಗಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಈ ವಾರ ತುಸು ಮಜವಾದ ಟಾಸ್ಕ್​ ನೀಡಲಾಗಿತ್ತು. ಉಗ್ರಂ ಮಂಜು ಮಹಾಪ್ರಭು ಆಗಿದ್ದು, ಅವರ ಎದುರೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ಸಂದರ್ಭದಲ್ಲಿ ಹನುಮಂತು ಶೋಭಾ ಶೆಟ್ಟಿಯ ಹೆಸರು ತೆಗೆದುಕೊಂಡು ಅದಕ್ಕೆ ಕಾರಣ ನೀಡಿದ್ದಾರೆ. ಆದರೆ ಇದಕ್ಕೆ ಶೋಭಾ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಶೋಭಾ ಅನ್ನು ಉಗ್ರಂ ಮಂಜು ತಡೆಯಲು ಹೋದಾಗ, ಮಹಾಪ್ರಭು ಆಗಿರುವ ಮಂಜು ಅವರ ಆಜ್ಞೆಯನ್ನು ಶೋಭಾ ಧಿಕ್ಕರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More