ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು

Updated on: Nov 27, 2024 | 5:46 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಉಗ್ರಂ ಮಂಜು ಅನ್ನು ರಾಜನನ್ನಾಗಿ ಮಾಡಿ ಅವರಿಗೆ ಕೆಲ ವಿಶೇಷ ಅಧಿಕಾರ ನೀಡಲಾಗಿತ್ತು. ಈಗ ಮೋಕ್ಷಿತಾ ಅನ್ನು ಮಹಾರಾಣಿಯನ್ನಾಗಿ ಮಾಡಿ ಅವರಿಗೆ ಕೆಲ ಅಧಿಕಾರ ನೀಡಲಾಗಿದೆ. ಇದು ಇಬ್ಬರ ನಡುವೆ ವೈಮನಸ್ಯಕ್ಕೆ ಕಾರಣವಾಗಿದೆ.

ಬಿಗ್​ಬಾಸ್ ಮನೆಯಲ್ಲಿ ಈ ವಾರ ‘ರಾಜ-ರಾಣಿ’ ಟಾಸ್ಕ್ ನಡೆದಿದೆ. ಉಗ್ರಂ ಮಂಜು ಅನ್ನು ಮಹಾರಾಜ ಮಾಡಿದ್ದ ಬಿಗ್​ಬಾಸ್ ಅವರಿಗೆ ಕೆಲವು ವಿಶೇಷ ಅಧಿಕಾರ ಕೊಟ್ಟಿದ್ದರು. ಅವರಿಗೆ ಮನೆಯ ಸದಸ್ಯರೆಲ್ಲರೂ ಗೌರವ ಕೊಡಬೇಕು, ಆಜ್ಞೆ ಪಾಲಿಸಬೇಕು ಎಂದಿದ್ದರು. ಆದರೆ ಈಗ ಟ್ವಿಸ್ಟ್ ಒಂದನ್ನು ಕೊಟ್ಟಿದ್ದು, ಮೋಕ್ಷಿತಾ ಅನ್ನು ಮಹಾರಾಣಿ ಮಾಡಿದ್ದಾರೆ. ಈಗ ಮಹಾರಾಜ ಮತ್ತು ಮಹಾರಾಣಿ ನಡುವೆ ವೈಮನಸ್ಯ ಶುರುವಾಗಿದೆ. ಇಬ್ಬರೂ ಪರಸ್ಪರ ಜೋರಾಗಿಯೇ ಕಿತ್ತಾಡಿದ್ದಾರೆ. ‘ನಿನ್ನದು ನರಿ ಕಣ್ಣೀರು’ ಎಂದು ಉಗ್ರಂ ಮಂಜು ಹೇಳಿದರೆ, ಅವರ ಮಾತಿಗೆ ‘ಥೂ’ ಎಂದು ಉಗಿದಿದ್ದಾರೆ ಮೋಕ್ಷಿತಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More