ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್

Updated on: Jan 04, 2025 | 7:58 PM

Bigg Boss Kannada: ಬಿಗ್​ಬಾಸ್ ಮನೆಗೆ ಕುಟುಂಬದವರು ಬಂದು ಹೋದ ಬಳಿಕ ಸ್ಪರ್ಧಿಗಳ ಮನಸ್ಥಿತಿ ಬದಲಾಗಿದೆ. ಹಳೆಯ, ಗಾಢ ಗೆಳೆತನಕ್ಕೆ ಬ್ರೇಕ್ ಬಿದ್ದಿದೆ. ಮಂಜು, ಗೌಥಮಿ ಗೆಳೆತನ ಬ್ರೇಕ್ ಆಗಿದೆ. ತ್ರಿವಿಕ್ರಮ್ ಹಾಗೂ ಭವ್ಯಾ ಗೆಳೆತನವೂ ಮುರಿದು ಹೋಗಿದೆ. ಆದರೆ ಈ ಬದಲಾವಣೆಗೆ ಕಾರಣ ಏನು? ಸುದೀಪ್ ಮುಂದೆ ಸ್ಪರ್ಧಿಗಳು ಹೇಳಿದ್ದೇನು?

ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಸ್ಪರ್ಧಿಗಳ ಕುಟುಂಬದವರು ಮನೆಗೆ ಬಂದಿದ್ದರು. ಬಿಗ್​ಬಾಸ್ ಮನೆಯಲ್ಲಿ ಈ ವಾರ ಹಲವು ಭಾವುಕ ಸನ್ನಿವೇಶ ಸೃಷ್ಟಿಯಾಗಿದ್ದವು. ಮನೆಗೆ ಬಂದ ಕುಟುಂಬದವರು ಸ್ಪರ್ಧಿಗಳಿಗೆ ಹಲವು ಕಿವಿ ಮಾತು ಹೇಳಿದರು. ಈ ವರೆಗೆ ಹೇಗೆ ಆಡಿದ್ದೀಯ, ಮುಂದೆ ಹೇಗೆ ಆಡಬೇಕು ಎಂದೆಲ್ಲ ಸಲಹೆಗಳನ್ನು ಕೊಟ್ಟರು. ಕೆಲವರು ನೇರವಾಗಿ ಇಂಥಹವರ ಜೊತೆ ಸೇರಬೇಡಿ ಎಂದು ಹೇಳಿದರು. ಇದೀಗ ಗೆಸ್ಟ್ ಮುಗಿಯುತ್ತಿದ್ದಂತೆ ಮನೆಯ ಸ್ಪರ್ಧಿಗಳ ನಡುವೆ ಇದ್ದ ಈಕ್ವೇಷನ್ ಬದಲಾವಣೆ ಆಗಿದೆ. ಈ ಹಿಂದೆ ಇದ್ದ ಗಾಢ ಗೆಳೆತನಗಳೆಲ್ಲ ಪೀಸ್-ಪೀಸ್ ಆಗಿ ಮುರಿದು ಬಿದ್ದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More