ಬಿಗ್​ಬಾಸ್: ಗೌತಮಿ ಹೊಗಳಿಕೆಗೆ ನಾಚಿ ನೀರಾದ ಮೋಕ್ಷಿತಾ

| Updated By: ಮಂಜುನಾಥ ಸಿ.

Updated on: Dec 10, 2024 | 6:09 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ನಲ್ಲಿ ಆಶ್ವರ್ಯಕರ ಘಟನೆ ನಡೆದಿದೆ. ಅಪರೂಪಕ್ಕೆ ಗೌತಮಿ, ಮೋಕ್ಷಿತಾರನ್ನು ಹೊಗಳಿದ್ದಾರೆ. ಗೌತಮಿ ಹಾಗೂ ಮೋಕ್ಷಿತಾ ಮೊದಲು ಗೆಳೆಯರಾಗಿದ್ದರು. ಆದರೆ ಈಗ ಪರಸ್ಪರ ಕಿತ್ತಾಡುತ್ತಿದ್ದಾರೆ. ಆದರೆ ಅಪರೂಪಕ್ಕೆ ಗೌತಮಿ, ಮೋಕ್ಷಿತಾರನ್ನು ಹೊಗಳಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಗೌತಮಿ, ಉಗ್ರಂ ಮಂಜು ಮತ್ತು ಮೋಕ್ಷಿತಾ ಒಟ್ಟಿಗೆ ಇದ್ದರು. ಮೂವರು ಗೆಳೆಯರಾಗಿದ್ದು ಒಟ್ಟಿಗೆ ಮಾತನಾಡಿಕೊಂಡು ಆಟವಾಡುತ್ತಿದ್ದರು. ಬಳಿಕ ಮೋಕ್ಷಿತಾ, ಉಗ್ರಂ ಮಂಜು ಮತ್ತು ಗೌತಮಿಯ ಸಂಘ ಬಿಟ್ಟು ಹೊರಬಂದು ಒಬ್ಬರೇ ಆಡಲು ಪ್ರಾರಂಭಿಸಿದರು. ಆಗ ಮಂಜು ಮತ್ತು ಗೌತಮಿ ಅವರು ಮೋಕ್ಷಿತಾರನ್ನು ಎದುರಾಳಿಯಾಗಿಸಿಕೊಂಡರು. ಪದೇ ಪದೇ ಮೋಕ್ಷಿತಾ ಹಾಗೂ ಮಂಜು-ಗೌತಮಿ ನಡುವೆ ಜಗಳ ನಡೆಯುತ್ತಲೇ ಇತ್ತು. ಕಳೆದ ವಾರವಂತೂ ಈ ಜಗಳ ತರಕಕ್ಕೆ ಏರಿತ್ತು. ಆದರೆ ಸುದೀಪ್ ಬುದ್ಧಿವಾದ ಹೇಳಿದ ಬಳಿಕ ಪರಿಸ್ಥಿತಿ ತುಸು ಬದಲಾದಂತೆ ಅನಿಸುತ್ತಿದೆ. ಗೌತಮಿ ಅಪರೂಪಕ್ಕೆ ಮೋಕ್ಷಿತಾರನ್ನು ಹೊಗಳಿ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 10, 2024 06:08 PM