‘ಧಮ್ ಇದ್ರೆ ಬಿಚ್ಚಿಡು’; ಗಾನವಿ-ಆಸಿಯಾ ಮಧ್ಯೆ ನಡೆಯಿತು ದೊಡ್ಡ ವಾಕ್ಸಮರ

Updated on: Nov 02, 2026 | 8:53 AM

ಬಿಗ್ ಬಾಸ್ ಮನೆಯಲ್ಲಿ ವಾರದ ನಾಮಿನೇಶನ್ ಪ್ರಕ್ರಿಯೆ ವೇಳೆ ಆಸಿಯಾ ಹಾಗೂ ಗಾನವಿ ನಡುವೆ ತೀವ್ರ ಕಿತ್ತಾಟ ನಡೆದಿದೆ. ಆಟದ ಕೊಡುಗೆ ಕಮ್ಮಿ ಎಂದ ಗಾನವಿಗೆ ಆಸಿಯಾ ಖಡಕ್ ಆಗಿ ಸವಾಲು ಎಸೆದಿದ್ದು ಮನೆಯಲ್ಲಿ ಕಾವೇರಿದ ವಾತಾವರಣ ಸೃಷ್ಟಿಸಿದೆ. ಆ ಬಗ್ಗೆ ಈ ವಿಡಿಯೋದಲ್ಲಿ ಇದೆ ಮಾಹಿತಿ.

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ವಾರದ ನಾಮಿನೇಶನ್ ಪ್ರಕ್ರಿಯೆ ಆರಂಭವಾಗಿದ್ದು, ಮನೆಯ ಸದಸ್ಯರ ನಡುವೆ ವಾಕ್ಸಮರ ತೀವ್ರಗೊಂಡಿದೆ. ಅರ್ಹತೆ ಇಲ್ಲದ ಸ್ಪರ್ಧಿಗಳ ಭಾವಚಿತ್ರಕ್ಕೆ ಕೊಡಲಿಯನ್ನು ಚುಚ್ಚಿ ನಾಮಿನೇಟ್ ಮಾಡುವ ವಿಶೇಷ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳ ನಡುವಿನ ಹಳೆಯ ಅಸಮಾಧಾನಗಳು ಬೀದಿಗೆ ಬಂದಿವೆ. ನಾಮಿನೇಶನ್ ವೇಳೆ ಗಾನವಿ ಅವರು ಆಸಿಯಾ ಅವರ ಭಾವಚಿತ್ರಕ್ಕೆ ಕೊಡಲಿ ಚುಚ್ಚಿ ತಮ್ಮ ನಿರ್ಧಾರವನ್ನು ತಿಳಿಸಿದರು. ಆಸಿಯಾ ಅವರ ಆಟ ಮತ್ತು ಕೊಡುಗೆ ಈ ಮನೆಯಲ್ಲಿ ತುಂಬಾ ಕಮ್ಮಿ ಇದೆ ಎಂದು ಗಾನವಿ ಬಹಿರಂಗವಾಗಿಯೇ ಆರೋಪಿಸಿದರು. ಈ ಹೇಳಿಕೆಯು ಆಸಿಯಾ ಅವರನ್ನು ತೀವ್ರ ಕೋಪಕ್ಕೆ ದೂಡಿತು.

ಗಾನವಿ ಅವರ ಆರೋಪಕ್ಕೆ ತಕ್ಷಣವೇ ತಿರುಗೇಟು ನೀಡಿದ ಆಸಿಯಾ, ‘ನಾನು ಆಡಿರುವಷ್ಟು ಟಾಸ್ಕ್ ಅನ್ನು ನೀನು ಆಡಿಯೇ ಇಲ್ಲ, ಹೋಗೆ ಅಲ್ಲಿಗೆ’ ಎಂದು ಏಕವಚನದಲ್ಲೇ ಕಿಡಿಕಾರಿದರು. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾತಾವರಣ ಮತ್ತಷ್ಟು ಕಾವೇರಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More