ಜಗದೀಶ್-ಹಂಸಾ ಡುಯೆಟ್, ವಕೀಲರ ಮನಸು ಗೆಲ್ಲೋ ಪ್ರಯತ್ನದಲ್ಲಿ ಹಂಸಾ
ಬಿಗ್ಬಾಸ್ ಕನ್ನಡ ವಾರದ ಪಂಚಾಯಿತಿಯ ಭಾನುವಾರದ ಎಪಿಸೋಡ್ ಸಖತ್ ಹಾಸ್ಯಮಯವಾಗಿ ಮೂಡಿಬರುವ ಸೂಚನೆಯನ್ನು ಬಿಡುಗಡೆ ಆಗಿರುವ ಪ್ರೋಮೋ ನೀಡಿದೆ. ಲಾಯರ್ ಜಗದೀಶ್ ಮತ್ತು ಹಂಸಾ ಡುಯೆಟ್ ಸಹ ಹಾಡಿದ್ದಾರೆ. ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಇಂದು ಎರಡನೇ ವಾರದ ಪಂಚಾಯಿತಿಯ ಎರಡನೇ ದಿನ. ಭಾನುವಾರದ ಎಪಿಸೋಡ್ ನಲ್ಲಿ ಸಾಕಷ್ಟು ತಮಾಷೆ, ಕಾಲೆಳೆತ, ಮೋಜು ಮಸ್ತಿಗಳು ಇರುತ್ತವೆ. ಇದರ ಜೊತೆಗೆ ಎಲಿಮಿನೇಷನ್ ಸಹ ಇರುತ್ತದೆ. ಬಿಗ್ಬಾಸ್ ಪ್ರಾರಂಭವಾದಾಗಿನಿಂದಲೂ ಲಾಯರ್ ಜಗದೀಶ್ ಮನೆಯ ಮುಖ್ಯ ಸದಸ್ಯರಾಗಿದ್ದಾರೆ. ಲಾಯರ್ ಜಗದೀಶ್, ಹಂಸಾ ನಡುವೆ ಭಿನ್ನ ರೀತಿಯ ಗೆಳೆತನ ಇದೆ. ಒಮ್ಮೆ ಬಹಳ ಜಗಳವಾಡುತ್ತಾರೆ ಆ ನಂತರ ಸಂಧಾನ ಮಾಡಿಕೊಳ್ಳುತ್ತಾರೆ. ಭಾನುವಾರದ ಎಪಿಸೋಡ್ನಲ್ಲಿ ಹಂಸಾ ಅವರೇ ಹೇಳಿರುವಂತೆ ‘ಅವರನ್ನು ವಾದದಲ್ಲಿ ಗೆಲ್ಲಲು ಸಾಧ್ಯ ಆಗಲ್ಲ, ಕನಿಷ್ಟ ಮನಸ್ಸಾದರೂ ಗೆದ್ದು ಒಲಿಸಿಕೊಳ್ಳೋಣ’ ಎಂದಿದ್ದಾರೆ. ಇದನ್ನು ಕೇಳಿ ನಕ್ಕಿರುವ ಸುದೀಪ್, ಇಬ್ಬರ ಕೈಯಲ್ಲಿ ಒಂದು ಡ್ಯಾನ್ಸ್ ಸಹ ಮಾಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ