ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್ ​

ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್ ​

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ವಿವೇಕ ಬಿರಾದಾರ

Updated on: Oct 13, 2024 | 10:49 AM

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್​ಗಳಲ್ಲಿ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಕಲನ ಕರ್ತವ್ಯವಾಗಿದೆ. ಆದರೆ ನಿಪ್ಪಾಣಿ ಘಟಕದ ಬಸ್​​​​ ಚಾಲಕ ಧೂಮಪಾನ ಮಾಡುತ್ತ ಚಾಲನೆ ಮಾಡಿದ್ದಾನೆ.

ಕೊಪ್ಪಳ, ಅಕ್ಟೋಬರ್​ 13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC)ಯ ಬಸ್​ಗಳಲ್ಲಿ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಕಲನ ಕರ್ತವ್ಯವಾಗಿದೆ. ಚಾಲನೆ ಸಮಯದಲ್ಲಿ ಚಾಲಕ ಮೊಬೈಲ್​ನಲ್ಲಿ ಮಾತನಾಡುವುದು, ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಆದರೂ ಕೂಡ ನಿಪ್ಪಾಣಿ ಘಟಕದ (Nipani Depot) ಬಸ್​​​​ ಚಾಲಕ ಧೂಮಪಾನ ಮಾಡುತ್ತ ವಾಹನ ಓಡಿಸಿದ್ದಾನೆ.

ನಿಪ್ಪಾಣಿ ಘಟಕಕ್ಕೆ ಸೇರಿದ ಕೆಎ 23, ಎಫ್ 1045 ನಂಬರ್​ನ ಕೆಎಸ್​ಆರ್​ಟಿಸಿ ಬಸ್​ ಗಂಗಾವತಿಯಿಂದ ಕೋಲ್ಹಾಪುರಕ್ಕೆ ತೆರಳುತ್ತಿತ್ತು. ಚಾಲಕ ಬೀಡಿ ಸೇದುತ್ತಾ ಬಸ್ ಚಲಾಯಿಸಿದ್ದಾನೆ. ಚಾಲಕ ಧೂಮಪಾನ ಮಾಡುವುದನ್ನು ಪ್ರಯಾಣಿಕ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾನೆ. ಬಸ್​ನಲ್ಲಿ ಧೂಮಪಾನ ನಿಷೇಧವಿದ್ದರೂ ಚಾಲಕ ಧೂಮಪಾನ ಮಾಡಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಡಿ ಸೇದುತ್ತಾ ಬಸ್​ ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ