ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ

|

Updated on: Dec 26, 2024 | 12:37 PM

Bigg Boss Kannada: ಈ ಹಿಂದೆ ಸ್ನೇಹಿತರಾಗಿದ್ದ ಮೋಕ್ಷಿತಾ ಮತ್ತು ಮಂಜು ಪರಸ್ಪರ ದುಷ್ಮನ್​ಗಳಾಗಿ ವಾರಗಳೇ ಕಳೆದಿವೆ. ಈಗ ಒಬ್ಬರ ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಇದೀಗ ಉಗ್ರಂ ಮಂಜು ಅನ್ನು ಮೋಕ್ಷಿತಾ ನಾಮಿನೇಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ಮಂಜು, ಮೋಕ್ಷಿತಾ ಜೊತೆ ಜಗಳ ಆಡಿದ್ದು, ಮಂಜು ತಲೆ ಮೇಲೆ ಮೋಕ್ಷಿತಾ ಬಾಟಲಿ ಒಡೆದಿದ್ದಾರೆ.

ಬಿಗ್​ಬಾಸ್ ಮನೆಯ ಹಳೆಯ ಗೆಳೆಯರಾಗಿದ್ದ ಉಗ್ರಂ ಮಂಜು ಮತ್ತು ಮೋಕ್ಷಿತಾ ದುಷ್ಮನ್​ಗಳಾಗಿ ಕೆಲ ವಾರಗಳೇ ಆಗಿವೆ. ಈಗ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದು. ಗುರುವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವೇಳೆ ಮೋಕ್ಷಿತಾ, ಮಂಜು ಅನ್ನು ನಾಮಿನೇಟ್ ಮಾಡಿದ್ದು, ಮೋಕ್ಷಿತಾ ನೀಡಿದ ಕಾರಣ ಮಂಜುಗೆ ಇಷ್ಟವಾಗಿಲ್ಲ. ಮೋಕ್ಷಿತಾ ನೀಡಿದ ಕಾರಣವನ್ನು ವಿರೋಧಿಸಿದ ಮಂಜು, ಮೋಕ್ಷಿತಾ ಜೊತೆ ಜಗಳ ಮಾಡಿದ್ದಾರೆ. ಈ ವೇಳೆ ಮೋಕ್ಷಿತಾ, ಉಗ್ರಂ ಮಂಜು ತಲೆಗೆ ಬಾಟಲಿಯಲ್ಲಿ ಹೊಡೆದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ