Bigg Boss Kannada: ಸಿಡಿದೆದ್ದ ನಮ್ರತಾ ಗೌಡ; ಕಣ್ಣೀರು ಹಾಕಿದ ಸಂಗೀತಾ ಶೃಂಗೇರಿ; ಬಿಗ್​ ಬಾಸ್​ ಮನೆಯಲ್ಲಿ ಎಲ್ಲರಿಗೂ ಶಾಕ್​

|

Updated on: Dec 07, 2023 | 9:38 AM

Namratha Gowda: ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ನಮ್ರತಾ ಗೌಡ ಕೂಡ ಸ್ಟ್ರಾಂಗ್​ ಸ್ಪರ್ಧಿ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಆಟದ ತೀವ್ರತೆ ಹೆಚ್ಚಾಗಿದೆ. ಸಂಗೀತಾ ಶೃಂಗೇರಿಗೂ ಅವರು ಆವಾಜ್​ ಹಾಕಿದ್ದಾರೆ. ಈ ಎಲ್ಲ ಕಾರಣದಿಂದ ರಾಕ್ಷಸರು ವರ್ಸಸ್​ ಗಂಧರ್ವರು ಟಾಸ್ಕ್​ ರೋಚಕವಾಗಿದೆ.

9ನೇ ವಾರದಲ್ಲಿ ಬಿಗ್​ ಬಾಸ್​ (Bigg Boss Kannada) ಮನೆ ರಣರಂಗ ಆಗಿದೆ. ರಾಕ್ಷಸರು ವರ್ಸಸ್​ ಗಂಧರ್ವರು ಟಾಸ್ಕ್​ನಲ್ಲಿ ಎರಡು ತಂಡಗಳ ನಡುವೆ ತೀವ್ರ ಜಗಳ ಆಗುತ್ತಿದೆ. ಮೊದಲು ಗಂಧರ್ವರಾಗಿದ್ದ ಸ್ಪರ್ಧಿಗಳು ಈಗ ರಾಕ್ಷಸರಾಗಿದ್ದಾರೆ. ಕೆಲವರು ಬಿಗ್​ ಬಾಸ್​ನ ನಿಯಮ ಮೀರಿ ನಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಮ್ರತಾ ಗೌಡ (Namratha Gowda) ಅವರ ಆಟ ಚುರುಕಾಗಿದೆ. ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಲು ಅವರು ಹೋರಾಡುತ್ತಿದ್ದಾರೆ. ಈ ಜರ್ನಿಯಲ್ಲಿ ಅವರು ಸಂಗೀತಾ ಶೃಂಗೇರಿಯನ್ನು ಎದುರು ಹಾಕಿಕೊಂಡಿದ್ದಾರೆ. ಟಾಸ್ಕ್​ ವಿಚಾರದಲ್ಲಿ ಕಿರಿಕ್​ ಆದಾಗ ನಮ್ರತಾ ಜೋರಾಗಿ ಕಿರುಚಾಡಿದ್ದಾರೆ. ಬಹುತೇಕರಿಂದ ಟೀಕೆಗೆ ಒಳಗಾದ ಸಂಗೀತಾ ಶೃಂಗೇರಿ (Sangeetha Sringeri) ಅವರು ಕಣ್ಣೀರು ಹಾಕಿದ್ದಾರೆ. ಈ ಸಂಚಿಕೆ ಕಲರ್ಸ್​ ಕನ್ನಡದಲ್ಲಿ ಡಿ.7ರಂದು ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ಉಚಿತವಾಗಿ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.