ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್

Updated on: Nov 04, 2026 | 8:31 AM

ಬಿಗ್ ಬಾಸ್ ಮನೆಯಲ್ಲಿ ಪ್ರೀತಿಪಾತ್ರರ ಸಂದೇಶ ಪಡೆಯಲು ಸ್ಪರ್ಧಿಗಳಿಗೆ ಹೊಸ ಹಾಗೂ ಕಠಿಣ ಸವಾಲು ಎದುರಾಗಿದೆ. ಕಂಬದ ಮೇಲೆ ನಿಂತು ನಡೆಸುವ ಈ ಕಠಿಣ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಪಡುತ್ತಿರುವ ಪಾಡು ಹಾಗೂ ಆಟದ ರೋಚಕ ಕ್ಷಣಗಳು ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.

ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ರೋಚಕತೆ ಹೆಚ್ಚಾಗುತ್ತಿದೆ. ಈ ವಾರದಲ್ಲಿ ಮನೆಯ ಸದಸ್ಯರಿಗೆ ತಮ್ಮ ಮನೆಯವರ ಪತ್ರವನ್ನು ಪಡೆದುಕೊಳ್ಳಲು ಟಾಸ್ಕ್ ನೀಡಲಾಗುತ್ತಿದೆ. ಆದರೆ ಇದು ಸುಲಭವಾಗಿರಲಿಲ್ಲ. ಬಿಗ್ ಬಾಸ್ ನೀಡುವ ಕಠಿಣ ಸವಾಲುಗಳನ್ನು ಎದುರಿಸಿ ಗೆದ್ದರೆ ಮಾತ್ರ ಪತ್ರ ಪಡೆಯಲು ಸಾಧ್ಯ ಎಂಬ ನಿಯಮ ರೂಪಿಸಲಾಗಿದೆ.

ಮನೆಯಲ್ಲಿ ಈಗ ಗಗನ್ ಹಾಗೂ ಯಶಸ್​​ಗೆ ಪತ್ರ ಪಡೆಯಲು ಟಾಸ್ಕ್ ಒಂದನ್ನು ನೀಡಲಾಗಿದೆ. ಇವರ ಪರವಾಗಿ ತಾಂಡವ್ ಹಾಗೂ ಧನುಷ್ ಆಡಿದ್ದಾರೆ. ಇದು ಸವಾಲಿನ ಟಾಸ್ಕ್ ಆಗಿದೆ. ಎತ್ತರದ ಕಂಬಗಳ ಮೇಲೆ ನಿಂತು, ಬೆಳಗಿನವರೆಗೆ ಬ್ಯಾಲೆನ್ಸ್ ಮಾಡಬೇಕಾದ ಕಠಿಣ ಪರೀಕ್ಷೆ ಇದಾಗಿದೆ. ಈ ಕಠಿಣ ಆಟದಲ್ಲಿ ಸ್ಪರ್ಧಿಗಳು ತಾಳ್ಮೆ ಮತ್ತು ದೈಹಿಕ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಈ ಟಾಸ್ಕ್ ಅಲ್ಲಿ ಪತ್ರ ಯಾರಿಗೆ ಸಿಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More