ಕಿಚ್ಚನ ಜಡ್ಜ್ಮೆಂಟ್; ನಾಮಿನೇಟ್ ಆದ ಎಂಟು ಮಂದಿ ಪೈಕಿ ಹೋಗೋದು ಇವರೇ?
ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಟ್ಟೂ 8 ಮಂದಿ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಧ್ರುವಂತ್ ಹಾಗೂ ರಿಷಾ ಗೌಡ ವೀಕ್ ಸ್ಪರ್ಧಿಗಳು ಎಂಬುದು ಮೇಲ್ನೋಟಕ್ಕೆ ಸ್ಪಟವಾಗಿ ಕಾಣಿಸುತ್ತಾ ಇದೆ. ಇವರ ಪೈಕಿ ಒಬ್ಬರು ಹೊರ ಹೋಗೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಭಾನುವಾರ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ಬಾರಿ ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಅಶ್ವಿನಿ ಗೌಡ, ಜಾನ್ವಿ, ಧ್ರುವಂತ್, ರಕ್ಷಿತಾ, ಕಾಕ್ರೋಚ್ ಸುಧಿ, ರಿಷಾ ಗೌಡ, ರಾಶಿಕಾ, ಮ್ಯೂಟಂಟ್ ರಘು ಇದ್ದಾರೆ. ಇವರ ಪೈಕಿ ಧ್ರುವಂತ್ ವೀಕ್ ಸ್ಪರ್ಧಿ ಎನಿಸಿಕೊಂಡಿದ್ದು, ಅವರು ಹೊರ ಹೋಗುವ ಸಾಧ್ಯತೆ ಹೆಚ್ಚಿದೆ. ರಿಷಾ ಗೌಡ ತಲೆಮೇಲೂ ತೂಗುಗತ್ತಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 15, 2025 09:01 AM

