Bigg Boss Promo: ರಕ್ಷಿತಾ ಶೆಟ್ಟಿ ಫೇಕ್ ಎಂದವರಿಗೆ ಕ್ಲ್ಯಾರಿಟಿ ಕೊಟ್ಟ ಸುದೀಪ್
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಕಿಚ್ಚ ಸುದೀಪ್ ಎಪಿಸೋಡ್ ಗಮನ ಸೆಳೆಯುವ ರೀತಿಯಲ್ಲಿ ಇರುತ್ತದೆ. ಈ ವಾರ ಸುದೀಪ್ ಎಪಿಸೋಡ್ ಪ್ರಸಾರ ಕಂಡಿದೆ. ಈ ಎಪಿಸೋಡ್ನಲ್ಲಿ ಸುದೀಪ್ ಅವರು ರಕ್ಷಿತಾ ಶೆಟ್ಟಿ ಫೇಕ್ ಎಂದವರಿಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಮನೆಯಲ್ಲಿರೋ ರಕ್ಷಿತಾ ಶೆಟ್ಟಿ ಅವರ ವಿಷಯ ಒಂದಲ್ಲಾ ಒಂದು ಕಾರಣಕ್ಕೆ ಚರ್ಚೆ ಆಗುತ್ತಲೇ ಇರುತ್ತದೆ. ರಕ್ಷಿತಾ ಶೆಟ್ಟಿ ನಾಟಕ ಮಾಡುತ್ತಾರೆ ಎಂಬುದು ಅಶ್ವಿನಿ ಗೌಡ, ಕಾಕ್ರೋಚ್ ಸುಧಿ ಅವರ ಆರೋಪ. ಆದರೆ, ಈ ಆರೋಪವನ್ನು ರಕ್ಷಿತಾ ಅಲ್ಲ ಗಳೆದಿದ್ದಾರೆ. ಈ ವಿಚಾರದಲ್ಲಿ ಕಿಚ್ಚ ಸುದೀಪ್ ಅವರು ಕ್ಲ್ಯಾರಿಟಿ ಕೊಟ್ಟಿದ್ದಾರೆ. ರಕ್ಷಿತಾ ಶೆಟ್ಟಿ ಪರ ವಹಿಸಿಕೊಂಡು ಅವರು ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

