ವಿನಯ್ಗೆ ಧನ್ಯವಾದ ಹೇಳಿದ ಕಾರ್ತಿಕ್ ಮತ್ತು ಸಂಗೀತಾ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ತಾವು ಜೀವಿಸದ ಕ್ಷಣಗಳ ಚಿತ್ರಗಳನ್ನು ನೋಡಿ ಖುಷಿ ಪಟ್ಟಿದ್ದಾರೆ ಸದಸ್ಯರು. ಈ ವೇಳೆ ಕಾರ್ತಿಕ್ ಹಾಗೂ ಸಂಗೀತಾ, ವಿನಯ್ಗೆ ಧನ್ಯವಾದ ಹೇಳಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 10 (BiggBoss) ಮುಗಿಯುವ ಹಂತಕ್ಕೆ ಬಂದಿದೆ. ಈ ವಾರಾಂತ್ಯಕ್ಕೆ ಫಿನಾಲೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ಈಗ ಮನೆಯಲ್ಲಿರುವ ಆರು ಜನರಲ್ಲಿ ಒಬ್ಬರು ವಿಜೇತರು ಎನಿಸಿಕೊಳ್ಳಲಿದ್ದಾರೆ. ಮನೆಯಲ್ಲಿರುವ ಸದಸ್ಯರಿಗೆ ಬಿಗ್ಬಾಸ್ ದಿನಕ್ಕೊಂದು ಹೊಸ ಚಟುವಟಿಕೆಗಳನ್ನು ನೀಡುತ್ತಿದ್ದು, ಅವರ ಬಂಧವನ್ನು ಗಟ್ಟಿಗೊಳಿಸುತ್ತಿದ್ದಾರೆ. ಇದೀಗ ‘ವಾಲ್ ಆಫ್ ಮೆಮೊರಿ’ಯನ್ನು ಬಿಗ್ಬಾಸ್ ಮನೆಯಲ್ಲಿ ಸೃಷ್ಠಿಸಲಾಗಿದ್ದು, ಮನೆಯ ಸದಸ್ಯರು ಮನೆಯಲ್ಲಿ ತಾವು ಕಳೆದ ಕ್ಷಣಗಳ ಚಿತ್ರಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಈ ವೇಳೆ ಕಾರ್ತಿಕ್ ಹಾಗೂ ಸಂಗೀತಾ, ವಿನಯ್ಗೆ ಧನ್ಯವಾದ ಸಹ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos