ಬಿಗ್ ಬಾಸ್ ಮನೆಯಲ್ಲಿ ಹರಿಯಿತು ಕಣ್ಣೀರ ಹೊಳೆ; ಇಂಥ ಪರಿಸ್ಥಿತಿಗೆ ಕಾರಣ ಏನು?
ಬಿಗ್ ಬಾಸ್ ಮನೆಯಲ್ಲಿ ಎಲ್ಲವೂ ಕಟ್ಟುನಿಟ್ಟಾಗಿ ಇರುತ್ತದೆ. ಪ್ರತಿಯೊಂದು ವಿಷಯಕ್ಕೂ ಕಷ್ಟಪಡಬೇಕು. ಹಲವು ಸೌಕರ್ಯಗಳನ್ನು ತ್ಯಜಿಸಿ ಬದುಕಬೇಕು. ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಇರುವುದು ಅಷ್ಟು ಸುಲಭವಲ್ಲ. 2ನೇ ವಾರದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಗಳಗಳನೆ ಅತ್ತಿದ್ದಾರೆ. ಆ ಕ್ಷಣದ ವಿಡಿಯೋ ಇಲ್ಲಿದೆ...
‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ರಿಯಾಲಿಟಿ ಶೋನಲ್ಲಿ ಹಲವು ವ್ಯಕ್ತಿತ್ವದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಈ ಶೋ ಎರಡನೇ ವಾರಕ್ಕೆ ಕಾಲಿಟ್ಟಿದೆ. ಇಲ್ಲಿಗೆ ಬರುವುದಕ್ಕೂ ಮುನ್ನ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದ ಈ ಸ್ಪರ್ಧಿಗಳು ಈಗ ಎಲ್ಲರನ್ನೂ ಬಿಟ್ಟು ದೊಡ್ಮನೆಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಬಿಗ್ ಬಾಸ್ (Bigg Boss) ಮನೆಯಲ್ಲಿ ಎಲ್ಲವೂ ಕಟ್ಟುನಿಟ್ಟಾಗಿ ಇರುತ್ತದೆ. ಪ್ರತಿಯೊಂದು ವಿಷಯಕ್ಕೂ ಕಷ್ಟಪಡಬೇಕು. ಹಲವು ಸೌಕರ್ಯಗಳನ್ನು ತ್ಯಜಿಸಿ ಬದುಕಬೇಕು. ಇಂಥ ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ಕುಟುಂಬದವರು ನೆನಪು ಕಾಡುತ್ತದೆ. ಗೌರೀಶ್ ಅಕ್ಕಿ, ತನಿಶಾ ಕುಪ್ಪಂಡ, ಈಶಾನಿ, ಸ್ನೇಹಿತ್, ವಿನಯ್ ಗೌಡ ಮುಂತಾದವರು ದೊಡ್ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅದರ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ. ಈ ಎಪಿಸೋಡ್ ‘ಕಲರ್ಸ್ ಕನ್ನಡ’ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ 24 ಗಂಟೆಯೂ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.