ಪೂರ್ಣಿಮಾಗೆ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದು ನಾನೇ: ಸಿದ್ದರಾಮಯ್ಯ, ಮುಖ್ಯಮಂತ್ರಿ

ಪೂರ್ಣಿಮಾಗೆ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದು ನಾನೇ: ಸಿದ್ದರಾಮಯ್ಯ, ಮುಖ್ಯಮಂತ್ರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 20, 2023 | 5:52 PM

ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡ ಕೃಷ್ಣಪ್ಪ ಪಕ್ಷ ಬಿಟ್ಟು ಹೋಗಿದ್ದರಿಂದ ಪೂರ್ಣಿಮಾ ಸಹ ಅನಿವಾರ್ಯವಾಗಿ ಬಿಜೆಪಿ ಸೇರಿ ಹಿರಿಯೂರುನಿಂದ ಶಾಸಕಿಯೂ ಆದರು. ಆದರೆ ಅವರ ದೇಹದಲ್ಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದ್ದ ಕಾರಣ ಈಗ ಪಕ್ಷಕ್ಕೆ ವಾಪಸ್ಸಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) 2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಧಾರಸ್ತಂಭಗಳಲ್ಲಿ ಒಬ್ಬರೆನಿಸಿರುವ ಎ ಕೃಷ್ಣ್ಪಪ್ಪ (A Krishnappa) ಅವರ ಮಗಳು ಪೂರ್ಣಿಮಾ ಶ್ರೀನಿವಾಸ್ (Purnima Srinivas) ಅವರಿಗೆ ಟಿಕೆಟ್ ತಪ್ಪಲು ತಾವು ಕೂಡ ಕಾರಣವಾಗಿದ್ದೆ ಅಂತ ತಪ್ಪೊಪ್ಪಿಕೊಂಡಾಗ ನೆರೆದಿದ್ದ ಜನರೆಲ್ಲ ಜೋರಾಗಿ ನಕ್ಕರು. ಮುಂದುವರಿದು ಮಾತಾಡಿದ ಪಕ್ಷ ದ್ರೋಹಿ ಭೈರತಿ ಬಸವರಾಜ್ ಗೆ ಟಿಕೆಟ್ ಕೊಡಿಸುವುದಕ್ಕಾಗಿ ಪೂರ್ಣಿಮಾಗೆ ಅದನ್ನು ತಪ್ಪಿಸಬೇಕಾಯಿತು, ಆದರೆ ಟಿಕೆಟ್ ತಪ್ಪಿದ್ದು ತನ್ನಿಂದಲೇ ಅಂತ ಗೊತ್ತಿದ್ದರೂ ಪೂರ್ಣಿಮಾ ಮತ್ತು ಅವರ ಪತಿ ಶ್ರೀನಿವಾಸ್ ತಮ್ಮ ಮೇಲೆ ಕೋಪ ಮಾಡಿಕೊಂಡಿಲ್ಲ ಎಂದು ಹೇಳಿದಾಗ ಜನ ಮತ್ತೇ ನಕ್ಕರು. ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡ ಕೃಷ್ಣಪ್ಪ ಪಕ್ಷ ಬಿಟ್ಟು ಹೋಗಿದ್ದರಿಂದ ಪೂರ್ಣಿಮಾ ಸಹ ಅನಿವಾರ್ಯವಾಗಿ ಬಿಜೆಪಿ ಸೇರಿ ಹಿರಿಯೂರುನಿಂದ ಶಾಸಕಿಯೂ ಆದರು. ಆದರೆ ಅವರ ದೇಹದಲ್ಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದ್ದ ಕಾರಣ ಈಗ ಪಕ್ಷಕ್ಕೆ ವಾಪಸ್ಸಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಪೂರ್ಣಿಮಾ ಪತಿ ಶ್ರೀನಿವಾಸ್ ಅವರ ಸಮಾಜಮುಖಿ ಚಿಂತನೆಯನ್ನು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಕೊಂಡಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ