AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ-ಆಸ್ಟ್ರೇಲಿಯಾ ಕ್ರಿಕೆಟ್‌ ಪಂದ್ಯ: ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಊಟದಲ್ಲಿ ಹುಳ ಪತ್ತೆ

ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಇಲಿ ಕಂಡುಬಂದಿತ್ತು. ಇದೀಗ ಶುಕ್ರವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ-ಆಸ್ಟ್ರೇಲಿಯಾ ಕ್ರಿಕೆಟ್‌ ಪಂದ್ಯ ಹಿನ್ನೆಲೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಮಧ್ಯಾಹ್ನ ನೀಡಿದ್ದ ಮೊಸರನ್ನದಲ್ಲಿ ಹುಳ ಪತ್ತೆ ಆಗಿದೆ. ಸದ್ಯ ಆಹಾರದಲ್ಲಿ ಹುಳ ಇರುವ ಫೋಟೋ ವೈರಲ್​​ ಆಗಿದೆ.

ಪಾಕಿಸ್ತಾನ-ಆಸ್ಟ್ರೇಲಿಯಾ ಕ್ರಿಕೆಟ್‌ ಪಂದ್ಯ: ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಊಟದಲ್ಲಿ ಹುಳ ಪತ್ತೆ
ಊಟದಲ್ಲಿ ಹುಳ ಪತ್ತೆ
Shivaprasad B
| Edited By: |

Updated on:Oct 20, 2023 | 6:53 PM

Share

ಬೆಂಗಳೂರು, ಅಕ್ಟೋಬರ್​​​​ 20: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ-ಆಸ್ಟ್ರೇಲಿಯಾ ಕ್ರಿಕೆಟ್‌ ಪಂದ್ಯ ಹಿನ್ನೆಲೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಊಟದಲ್ಲಿ ಹುಳ (Worm) ಪತ್ತೆ ಆಗಿದೆ. ಮಧ್ಯಾಹ್ನ ನೀಡಿದ್ದ ಮೊಸರನ್ನದಲ್ಲಿ ಹುಳ ಕಂಡುಬಂದಿರುವ ಆರೋಪ ಮಾಡಿದ್ದು, ಪೊಲೀಸರ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹುಳ ಇರುವ ಫೋಟೋ ಹರಿದಾಡಿದೆ. ಆಹಾರದಲ್ಲಿ ಅಕ್ಕಿಯಂತೆ ಕಂಡುಬರುವ ಹುಳ ಇರುವ ಫೋಟೋ ವೈರಲ್​​ ಆಗಿದೆ.

ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಇಲಿ

ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಇಲಿ ಕಂಡುಬಂದಿತ್ತು. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ಸೇರಿದಂತೆ ಕೆಲ ಸಂಘ, ಸಂಸ್ಥೆಗಳು ಸೇರಿ ಸೆ.26 ಬೆಂಗಳೂರು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದವು.

ಇದನ್ನೂ ಓದಿ: ಕೋರಮಂಗಲ ಡ್ರಂಕನ್ ಡ್ಯಾಡ್ ಪಬ್ ಮುಂದೆ ಕುಡಿತದ ಅಮಲಿನಲ್ಲಿ ಡ್ರಂಕ್ ಡಾಟರ್ ಗಳ ರಂಪಾಟ

ಇದರಿಂದ ರಾಜ್ಯ ರಾಜಧಾನಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ​ಪ್ರತಿಭಟನೆಯ ಭದ್ರತೆಗೆ ನಿಯೋಜನೆ ಮಾಡಿದ ಪೊಲೀಸರಿಗೆ ಹೋಟೆಲ್‌ನಿಂದ ತಿಂಡಿ ಸರಬರಾಜು ಮಾಡಲಾಗಿದ್ದು, ಅದರಲ್ಲಿ ಸತ್ತ ಇಲಿ ಪತ್ತೆಯಾಗಿತ್ತು. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದರು.

ಹೋಟೆಲ್​ ಮಾಲೀಕನ ವಿರುದ್ಧ ಕ್ರಿಮಿನಲ್‌ ಕೇಸ್

ಈ ಬಗ್ಗೆ ಬೆಂಗಳೂರಲ್ಲಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಪ್ರತಿಕ್ರಿಯಿಸಿದ್ದು, ಸಂಚಾರಿ ಸಿಬ್ಬಂದಿಗೆ ನೀಡಿದ್ದ ಆಹಾರ ಪೊಟ್ಟಣದಲ್ಲಿ ಇಲಿ ಪತ್ತೆಯಾಗಿತ್ತು. ರೈಸ್‌ಬಾತ್‌ನಲ್ಲಿ ಇಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಹೋಟೆಲ್​ ಮಾಲೀಕನ ವಿರುದ್ಧ ಕ್ರಿಮಿನಲ್‌ ಕೇಸ್ ದಾಖಲಿಸುತ್ತೇವೆ ಎಂದು ಹೇಳಿದ್ದರು. ಸದ್ಯ ಅದೃಷ್ಟವಶಾತ್ ಯಾರೂ ಊಟ ಸೇವಿಸಿರಲಿಲ್ಲ. ಒಂದು ವೇಳೆ ಇಲಿ ಇದ್ದ ಊಟ ಸೇವಿಸಿದ್ರೆ ಅನಾಹುತ ಆಗುವ ಸಾಧ್ಯತೆ ಇತ್ತು.

ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಟ್ರಾಫಿಕ್ ಜಾಮ್​ 

ಆಸ್ಟ್ರೇಲಿಯಾ v/s ಪಾಕಿಸ್ತಾನ ವಿಶ್ವ ಕಪ್​ ಪಂದ್ಯವಳಿ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಟ್ರಾಫಿಕ್ ಜಾಮ್​ ಉಂಟಾಗಿದೆ. ಆಸೀಸ್ – ಪಾಕ್ ಹೈ ವೋಲ್ಟೇಜ್ ಕದನ ನೋಡುವುದಕ್ಕೆ ಫ್ಯಾನ್ಸ್​ ಕಾತರಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ಆಗಮಿಸಿದ್ದಾರೆ. ಹೀಗಾಗಿ ಸ್ಟೇಡಿಯಂ ಸುತ್ತ ಫುಲ್ ಜಾಮ್ ಆಗಿದ್ದು, ಪಾರ್ಕಿಂಗ್ ಮಾಡಲು ಕ್ರಿಕೆಟ್ ಪ್ರೇಮಿಗಳು ಹರಸಾಹಸ ಪಟ್ಟಿದ್ದಾರೆ.

ಕೋರಮಂಗಲದಲ್ಲಿ ಪಾನಮತ್ತ ಯುವತಿ ಹೈ‌ಡ್ರಾಮ

ಕೋರಮಂಗಲದಲ್ಲಿ ಪಾನಮತ್ತ ಯುವತಿ ಹೈ‌ಡ್ರಾಮ ಮಾಡಿದ್ದು, ತಡ ರಾತ್ರಿ ಕುಡಿದ ಆಮಲಿನಲ್ಲಿ ಸಾರ್ವಜನಿಕರಿಗೆ ಉಪದ್ರವ ನೀಡಿದ್ದಾರೆ. ರಸ್ತೆಯಲ್ಲಿ ತೆರಳುತ್ತಿದ್ದ ಕಾರಿನ ಮೇಲೆ ಹತ್ತಿ ಅವಾಂತರ ಸೃಷ್ಟಿ ಮಾಡಿದ್ದಳು. ನಡು ರಸ್ತೆಯಲ್ಲಿಯೇ ಬಿದ್ದು ಯುವತಿಯರು ಒದ್ದಾಡಿದ್ದಾರೆ. ಕೋರಮಂಗಲದ ಡ್ರಂಕನ್ ಡ್ಯಾಡ್ ಪಬ್ ಮುಂದೆ ನಿನ್ನೆ ರಾತ್ರಿ 12:30 ರ ವೇಳೆಗೆ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ವಶಕ್ಕೆ ಪಡೆದು ವಾರ್ನ್ ಮಾಡಿ ಕಳುಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:52 pm, Fri, 20 October 23