ಸಿನಿಮಾ ಆಗುತ್ತಿದೆ ‘ಸಂತು-ಪಂತು’: ಶೂಟಿಂಗ್ ಯಾವಾಗ ಶುರು?

|

Updated on: Feb 01, 2024 | 11:26 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಮುಗಿದಿದೆ. ಈ ಸೀಸನ್​ನ ಪ್ರಮುಖ ಅಂಶಗಳಲ್ಲಿ ಒಂದು ‘ಸಂತು-ಪಂತು’ ಗೆಳೆತನ. ಇದೀಗ ಇವರ ಗೆಳೆತನವನ್ನೇ ಪ್ರಧಾನವಾಗಿಟ್ಟುಕೊಂಡು ಇದೇ ಹೆಸರಿನ ಸಿನಿಮಾ ತೆರೆಗೆ ಬರುತ್ತಿದೆ.

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಮುಗಿದಿದೆ. ಸ್ಪರ್ಧಿಗಳೆಲ್ಲ ಹೊರಗೆ ಬಂದಿದ್ದು, ಸರಣಿ ಸಂದರ್ಶನಗಳ ಮೂಲಕ ತಮ್ಮ ಬಿಗ್​ಬಾಸ್ ಮನೆ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಾರಿಯ ಬಿಗ್​ಬಾಸ್​ನಲ್ಲಿ ಸಖತ್ ಹೈಲೈಟ್ ಆದ ವಿಷಯವೆಂದರೆ ‘ಸಂತು-ಪಂತು’ ಗೆಳೆತನ. ಸೀಸನ್ ಆರಂಭದಿಂದಲೂ ಈ ಇಬ್ಬರೂ ಪರಸ್ಪರ ಗೆಳೆಯರಾಗಿಯೇ ಇದ್ದರು. ಸುದೀಪ್ ಸಹ ಇವರಿಬ್ಬರ ಗೆಳೆತನಕ್ಕೆ ಭೇಷ್ ಎಂದರು. ಇದೀಗ ಈ ಇಬ್ಬರ ಗೆಳೆತನವನ್ನು ಇಟ್ಟುಕೊಂಡೇ ‘ಸಂತು-ಪಂತು’ ಹೆಸರಿನ ಸಿನಿಮಾ ಬರುತ್ತಿದೆ. ಈ ಬಗ್ಗೆ ಸ್ವತಃ ತುಕಾಲಿ ಸಂತು ಅವರೇ ಖಾತ್ರಿ ನೀಡಿದ್ದಾರೆ. ವರ್ತೂರು ಸಂತು ಅವರು ಒಪ್ಪಿಗೆ ನೀಡಿದ ಕೂಡಲೇ ಸಿನಿಮಾ ಪ್ರಾರಂಭವಾಗಲಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ