ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಡಿವೋರ್ಸ್ ಪಡೆದಿದ್ದಕ್ಕೆ ಇದೆ ಪ್ರಮುಖ ಕಾರಣ
ನಟಿ, ನಿರೂಪಕಿ, ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಈಗ ಬಿಗ್ ಬಾಸ್ ಸ್ಪರ್ಧಿ ಆಗಿದ್ದಾರೆ. ಇತ್ತೀಚೆಗೆ ಶುರುವಾದ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಅವರು ಎಂಟ್ರಿ ನೀಡಿದ್ದಾರೆ. ದೊಡ್ಮನೆಗೆ ಹೋಗುವುದಕ್ಕೂ ಮುನ್ನ ಅಶ್ವಿನಿ ಗೌಡ ಅವರು ಟಿವಿ9ಗೆ ಸಂದರ್ಶನ ನೀಡಿದ್ದರು.
ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ (Ashwini Gowda) ಅವರು ಈಗ ಬಿಗ್ ಬಾಸ್ ಸ್ಪರ್ಧಿ ಆಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋಗೆ ಅವರು ಎಂಟ್ರಿ ನೀಡಿದ್ದಾರೆ. ದೊಡ್ಮನೆಗೆ ಹೋಗುವುದಕ್ಕೂ ಮುನ್ನ ಅಶ್ವಿನಿ ಗೌಡ ಅವರು ಟಿವಿ9ಗೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು ತಮ್ಮ ಖಾಸಗಿ ಬದುಕಿನ ಬಗ್ಗೆ ಕೂಡ ಮಾತನಾಡಿದ್ದಾರೆ. ಡಿವೋರ್ಸ್ (Divorce) ಬಗ್ಗೆ ಎದುರಾದ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ. ‘ಯಾರೂ ಕೆಟ್ಟವರಲ್ಲ. ಅವರು ಒಳ್ಳೆಯ ವ್ಯಕ್ತಿ ಆಗಿದ್ದರು. ನನ್ನ ಮಗನಿಗೆ ಒಳ್ಳೆಯ ತಂದೆ ಆಗಿದ್ದರು. ನಮ್ಮ ನಡುವೆ ಹೊಂದಾಣಿಕೆ ಇರಲಿಲ್ಲ. ನಾವು ಜಗಳ ಆಡುತ್ತಾ ಮಗನನ್ನು ಕೆಟ್ಟ ಪರಿಸರದಲ್ಲಿ ಬೆಳೆಸಲು ನನಗೆ ಇಷ್ಟ ಇರಲಿಲ್ಲ. ಹಾಗಾಗಿ ನಾವು ದೂರಾದೆವು’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
