Bigg Boss Kannada 12: ಕಳಪೆ ಹಣೆಪಟ್ಟಿ ಹೊತ್ತು ಜೈಲು ಸೇರಿದ ರಾಶಿಕಾ ಶೆಟ್ಟಿ, ಮಂಜು ಭಾಷಿಣಿ

Updated on: Oct 10, 2025 | 4:14 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ಎರಡನೇ ವಾರಾಂತ್ಯ ಸಮೀಪಿಸಿದೆ. ಈ ವಾರ ಕಳಪೆ ಯಾರು ಎಂದು ನಿರ್ಧರಿಸಲಾಗಿದೆ. ಜಂಟಿಗಳ ತಂಡದ ಮಂಜು ಭಾಷಿಣಿ ಹಾಗೂ ರಾಶಿಕಾ ಶೆಟ್ಟಿ ಅವರನ್ನು ಕಳಪೆ ಅಂತ ತೀರ್ಮಾನ ಮಾಡಲಾಗಿದೆ. ಹಾಗಾಗಿ ಅವರಿಬ್ಬರನ್ನು ಜೈಲಿಗೆ ಕಳಿಸಲಾಗಿದೆ

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಲ್ಲಿ 2ನೇ ವೀಕೆಂಡ್ ಸಮೀಪಿಸಿದೆ. ಈ ವಾರದಲ್ಲಿ ಕಳಪೆ ಯಾರು ಎಂಬುದನ್ನು ನಿರ್ಧರಿಸಲಾಗಿದೆ. ಜಂಟಿಗಳ ತಂಡದಲ್ಲಿ ಇರುವ ಮಂಜು ಭಾಷಿಣಿ (Manju Bhashini) ಮತ್ತು ರಾಶಿಕಾ ಶೆಟ್ಟಿ ಅವರನ್ನು ಕಳಪೆ ಎಂದು ತೀರ್ಮಾನಿಸಲಾಗಿದೆ. ಹಾಗಾಗಿ ಅವರಿಬ್ಬರನ್ನು ಜೈಲಿಗೆ ಕಳಿಸಲಾಗಿದೆ. ಈ ಸೀಸನ್​​ನಲ್ಲಿ ಮೊದಲ ಬಾರಿಗೆ ಜೈಲು ಸೇರಿದ ಸ್ಪರ್ಧಿಗಳು ಇವರು. ತಮ್ಮನ್ನು ಕಳಪೆ ಎಂದು ಹೇಳಿರುವುದಕ್ಕೆ ರಾಶಿಕಾ ಶೆಟ್ಟಿ (Rashika Shetty) ಅವರಿಗೆ ಸಖತ್ ಬೇಸರ ಆಗಿದೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ರೆಬೆಲ್ ಆಗಲು ಅವರು ತೀರ್ಮಾನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.