ಜಾಲಿವುಡ್ ಬಂದ್, ಆದರೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆ ಓಪನ್
ಜಲ ಕಾಯ್ದೆ, ವಾಯು ಕಾಯ್ದೆ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿಯಲಾಗಿದೆ. ಆದರೆ ಅದೇ ಜಾಗದಲ್ಲಿ ಇರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಮನೆಗೆ ಅನುಮತಿ ನೀಡಲಾಗಿದೆ. ಈ ಬಗ್ಗೆ ಸಚಿವ ಈಶ್ವರ ಖಂಡ್ರೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನಾಗೇಂದ್ರ ಸ್ವಾಮಿ ಮಾತನಾಡಿದ್ದಾರೆ.
ತಾಜ್ಯ ನಿರ್ವಹಣೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ ಜಾಲಿವುಡ್ ಸ್ಟುಡಿಯೋಸ್ (Jollywood Studios) ಬಂದ್ ಮಾಡಲಾಗಿದೆ. ಅದೇ ಜಾಗದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ನಡೆಯುತ್ತಿದೆ. ಒಂದು ದಿನ ಬಿಗ್ ಬಾಸ್ ಮನೆ ಕೂಡ ಬಂದ್ ಆಗಿತ್ತು. ಆದರೆ ಡಿಕೆ ಶಿವಕುಮಾರ್ ಅವರು ಮಧ್ಯಸ್ಥಿಕೆ ವಹಿಸಿದ್ದರಿಂದ ಬಿಗ್ ಬಾಸ್ ನಡೆಸಲು ಅನುಮತಿ ಸಿಕ್ಕಿತು. ಬಿಗ್ ಬಾಸ್ (Bigg Boss Kannada) ಹೊರತುಪಡಿಸಿ ಜಾಲಿವುಡ್ನ ಇತರೆ ಚಟುವಟಿಕೆಗಳನ್ನು ಬಂದ್ ಮಾಡಿಸಲಾಗಿದೆ. ‘ಜಾಲಿವುಡ್ ಸ್ಟುಡಿಯೋದವರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಜಲ ಕಾಯ್ದೆ, ವಾಯು ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಅನೇಕ ದೂರುಗಳ ಬಂದಿದ್ದವು. ಅವುಗಳ ಆಧಾರದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ಜಾಲಿವುಡ್ ಮುಚ್ಚುವ ಆದೇಶ ಕೊಡಲಾಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಉಲ್ಲಂಘನೆ ಆಗಿದೆಯೋ ಅಲ್ಲಿ ಎಲ್ಲ ಕಡೆ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನಿಗಿಂತ ಯಾರೂ ಕೂಡ ದೊಡ್ಡವರಲ್ಲ’ ಎಂದು ಈಶ್ವರ ಖಂಡ್ರೆ (Eshwara Khandre) ಅವರು ಹೇಳಿದ್ದಾರೆ.
ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನಾಗೇಂದ್ರ ಸ್ವಾಮಿ ಮಾತನಾಡಿದ್ದಾರೆ. ‘ಜಾಲಿವುಡ್ ಕ್ಲೋಸ್ ಆಗಿದೆ. ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಬಹುಜನರ ಬೇಡಿಕೆ ವಿಚಾರವಾಗಿ ಉಪ ಮುಖ್ಯಮಂತ್ರಿಗಳು ಜನರ ಭಾವನೆಗೆ ಸ್ಪಂದಿಸುವ ಕೆಲಸವನ್ನಷ್ಟೇ ಮಾಡಿದ್ದಾರೆ. ಅಲ್ಲಿನ ಮಾಲಿನ್ಯದ ವಿಚಾರದಲ್ಲಿ ಏನೂ ಸಮಸ್ಯೆ ಆಗದ ರೀತಿಯಲ್ಲಿ ಒಟ್ಟು 30 ಎಕರೆ ಜಾಗದಲ್ಲಿ ಒಂದೂವರೆ ಎಕರೆ ಪ್ರದೇಶ ಮಾತ್ರ ಬಿಗ್ ಬಾಸ್ ಎಂಬುದನ್ನು ಅರ್ಥೈಸಿಕೊಂಡಿದ್ದಾರೆ. ಆದರೆ ಜಾಲಿವುಡ್ಗೆ ಕಾನೂನಿನ ರೀತಿ ಕ್ರಮ ಕೈಕೊಳ್ಳಲು ಜಿಲ್ಲಾಡಳಿತ ಮತ್ತು ಸರ್ಕಾರ ಸಹಕರಿಸುವುದಾಗಿ ಹೇಳಿದೆ’ ಎಂದು ನಾಗೇಂದ್ರ ಸ್ವಾಮಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

