ಬಿಗ್ ಬಾಸ್ ಕನ್ನಡ: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್ ಸಿಂಗ್

Edited By:

Updated on: Dec 29, 2025 | 6:53 PM

ಸೂರಜ್ ಸಿಂಗ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಟಿವಿ9 ಜತೆ ಮಾತನಾಡಿ ತಮ್ಮ ಬದುಕಿನ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಿಲೇಷನ್​ಶಿಪ್ ಬಗ್ಗೆ ಕೂಡ ಮಾತನಾಡಿದ್ದಾರೆ. ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ..

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹೋಗಿದ್ದ ಸೂರಜ್ ಸಿಂಗ್ ಅವರು ನಿಜ ಜೀವನದಲ್ಲಿ ತುಂಬ ಕಷ್ಟಗಳನ್ನು ಕಂಡಿದ್ದಾರೆ. ಬಿಗ್ ಬಾಸ್ ಶೋ ಮೂಲಕ ಅವರಿಗೆ ಬಹಳ ಖ್ಯಾತಿ ಸಿಕ್ಕಿದೆ. ಈಗ ಅವರು ಎಲಿಮಿನೇಟ್ ಆಗಿ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಟಿವಿ9 ಜತೆ ಮಾತನಾಡಿ ತಮ್ಮ ಬದುಕಿನ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಿಲೇಷನ್​ಶಿಪ್ (Relationship) ಬಗ್ಗೆ ಕೂಡ ಮಾತನಾಡಿದ್ದಾರೆ. ‘ಈಗ ನನಗೆ ಯಾರೂ ಲವ್ವರ್ ಇಲ್ಲ. ಈ ಮೊದಲು ನಾನು ಮೂರು ರಿಲೇಷನ್​ಶಿಪ್​​ನಲ್ಲಿ ಇದ್ದೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ಕಳೆದ 10-12 ವರ್ಷಗಳಲ್ಲಿ ಮೊದಲ ಎರಡು ರಿಲೇಷನ್​ಶಿಪ್ ತುಂಬ ಗಂಭೀರವಾಗಿ ಇರಲಿಲ್ಲ. ಇನ್ನೊಂದು ಸೀರಿಯಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಬ್ರೇಕಪ್ ಆಯಿತು’ ಎಂದು ಸೂರಜ್ ಸಿಂಗ್ (Suraj Singh) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.