ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆಯಲ್ಲಿ ಕಾವ್ಯಾ ಗೌಡ
‘ಬಿಗ್ ಬಾಸ್ ಕನ್ನಡ 13’ ಶೋನಲ್ಲಿ ಕಾವ್ಯಾ ಗೌಡ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಗೆ ಬಂದ ಬಳಿಕ ಟಿವಿ9 ಜತೆ ಮಾತನಾಡಿದ್ದಾರೆ. ನಾನು ಹೇಗೆ ಇದ್ದೆನೋ ಹಾಗೆಯೇ ವಾಪಸ್ ಬಂದಿದ್ದೇನೆ. ತುಂಬಾ ಜನರ ಪ್ರೀತಿ ಗೆದ್ದಿದ್ದೇನೆ. ಒಳ್ಳೆಯ ಸಿನಿಮಾ, ಸೀರಿಯಲ್ ಸಿಗುತ್ತದೆ ಅಂತ ನಿರೀಕ್ಷಿಸುತ್ತೇನೆ’ ಎಂದು ಕಾವ್ಯಾ ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಕಾವ್ಯಾ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಗೆ ಬಂದ ಬಳಿಕ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಆಸಿಯಾ, ತಾಂಡವ್ ರಾವ್, ಯಶಸ್ ಜೊತೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದೆ. ಅವರನ್ನು ನಾನು ಈಗ ಮಿಸ್ ಮಾಡಿಕೊಳ್ಳುತ್ತೇನೆ. ಈ ಮೂವರು ನಿಜವಾದ ವ್ಯಕ್ತಿತ್ವದಲ್ಲಿ ಆಟ ಆಗುತ್ತಿದ್ದಾರೆ. ನಾನು ಹೊರಗಡೆ ಬಂದು ಯಾವುದೇ ಸಂಚಿಕೆ ನೋಡಿಲ್ಲ. ತಾಂಡವ್ ಅವರು ಹೊರಗಡೆ ನನ್ನ ಜೊತೆ ಯಾವ ರೀತಿ ಇದ್ದರೋ ಮನೆಯಲ್ಲೂ ಹಾಗೆಯೇ ಇದ್ರು ಎಂದುಕೊಂಡಿದ್ದೇನೆ. ಆಸಿಯಾ ಕೂಡ ನೈಜವಾಗಿದ್ದಾರೆ ಎನಿಸುತ್ತದೆ. ಬಿಗ್ ಬಾಸ್ ಒಂದು ದೊಡ್ಡ ವೇದಿಕೆ. ನಾನು ಕೂಡ ಕನಸುಗಳನ್ನು ಹೊತ್ತುಕೊಂಡು ಬಂದಿದ್ದೆ. ನನ್ನ ಪೂರ್ಣ ಸಾಮರ್ಥ್ಯದಲ್ಲಿ ಆಟ ಆಡಿದ್ದೇನೆ. ನಾನು ಸೋತೆ ಅಂತ ಹೇಳಲ್ಲ. ನಾನು ಕೂಡ ಗೆದ್ದಿದ್ದೇನೆ. ನಾನು ಹೇಗೆ ಇದ್ದೆನೋ ಹಾಗೆಯೇ ವಾಪಸ್ ಬಂದಿದ್ದೇನೆ. ತುಂಬಾ ಜನರ ಪ್ರೀತಿ ಗೆದ್ದಿದ್ದೇನೆ. ಒಳ್ಳೆಯ ಸಿನಿಮಾ, ಸೀರಿಯಲ್ ಸಿಗುತ್ತದೆ ಅಂತ ನಿರೀಕ್ಷಿಸುತ್ತೇನೆ’ ಎಂದು ಕಾವ್ಯಾ ಗೌಡ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
