ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್

Updated on: Sep 12, 2026 | 1:58 PM

ಬಿಗ್ ಬಾಸ್ ಕನ್ನಡ ಮೊದಲ ವಾರ ಪೂರ್ಣಗೊಂಡಿದ್ದು, ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಮನೆಯಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಸ್ಪರ್ಧಿಗಳ ನಡುವಿನ ತಾರತಮ್ಯದ ಕಿಚ್ಚು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಬಾರಿಯ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ನಡೆಗೆ ಭಾರೀ ಗರಂ ಆಗಿದ್ದು, ಗಗನ್ ಹಾಗೂ ತಾಂಡವ್ ರಾಮ್ ಅವರಿಗೆ ಕಠಿಣವಾಗಿ ಕ್ಲಾಸ್ ತಗೆದುಕೊಳ್ಳುವ ಸೂಚನೆ ಸಿಕ್ಕಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಮೊದಲ ವಾರದ ಪಂಚಾಯ್ತಿ ಬಂದಿದೆ. ಗಗನ್ ಚಿನ್ನಪ್ಪಗೆ ನೀಡಲಾಗಿದ್ದ ವಿಐಪಿ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಾಯಿಸಿಕೊಂಡಿರುವುದು ಸುದೀಪ್ ಅವರ ಕೆಂಗಣ್ಣಿಗೆ ಕಾರಣವಾಗಿದೆ. ಆಟದ ಮೂಲ ನಿಯಮಗಳನ್ನು ಮೂಲೆಗೆ ತಳ್ಳಿ, ತಮಗೆ ಬೇಕಾದಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದನ್ನು ಸುದೀಪ್ ನೇರವಾಗಿ ಪ್ರಶ್ನಿಸಲಿದ್ದಾರೆ.

ಮತ್ತೊಂದೆಡೆ ಮನೆಯಲ್ಲಿ ‘ಕಾಮನ್ ಮ್ಯಾನ್’ ಹಾಗೂ ‘ಸೆಲೆಬ್ರಿಟಿ’ ಎಂಬ ಭೇದಭಾವ ಮತ್ತೆ ತಲೆದೂರಿದೆ. ಗಗನ್ ಹಾಗೂ ತಾಂಡವ್ ರಾಮ್ ಅವರ ನಡೆಗಳು ಮನೆಯಲ್ಲಿ ಸಾರಾಸಗಟಾಗಿ ಸಾಮಾನ್ಯ ಸ್ಪರ್ಧಿಗಳನ್ನು ಟಾರ್ಗೆಟ್ ಮಾಡುವಂತಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ವೇದಿಕೆ ಮೇಲೆಯೇ ಕಿಚ್ಚ ಸುದೀಪ್ ಗಂಭೀರ ಚರ್ಚೆ ನಡೆಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More